• waytochurch.com logo
Song # 9209

kanasu kanuthidhe



ಕನಸು ಕಾಣುತ್ತಿದೆ, ಮನಸ್ಸು ಕುಣಿಯುತಿದೆ (೨)
ಓ ದೇವ ನಿನ್ನನು ನೋಡಲು ನನ್ನ ಮನವು ಕಾಯುತಿದೆ
||ಕನಸು ಕಾಣುತಿದೆ||
ಮುಂಜಾನೆ ಮಂಜಲಿ ನಾ ನಿನ್ನ ನೋಡಿದೆ,
ಗಾಳಿಯಂತೆ ನನ್ನೊಳಗೆ ನೀ ಸೇರಿದೆ (೨),
ಆ ಕ್ಷಣವೆ ನನ್ನ ಬಾಳು ಹಸಿರಾಯಿತು,
ಹೂವಂತೆ ಗಮ ಗಮಿಸಿತು (೨)
||ಕನಸು ಕಾಣುತಿದೆ||
ಕತ್ತಲೆಯ ಬಾಳಿಗೆ ಬೆಳಕಾಗಿ ನೀ ಬಂದೆ,
ಈ ಜೀವಕೆ ಹೊಸ ದಾರಿಯ ನೀ ತೋರಿದೆ (೨),
ಆ ಕ್ಷಣವೆ ನನ್ನ ಹೃದಯ ಕುಣಿದಾಡಿತು,
ನವಿಲಿನಂತೆ ನಲಿದಾಡಿತು (೨)
||ಕನಸು ಕಾಣುತಿದೆ||

Posted on
  • Song
  • Name :
  • E-mail :
  • Song No

© 2023 Waytochurch.com