• waytochurch.com logo
Song # 9216

koka sullammaಲೋಕ ಸುಳ್ಳಮ್ಮಾ


ಲೋಕ ಸುಳ್ಳಮ್ಮಾ, ಈ ಪ್ರೀತಿ ಸುಳ್ಳಮ್ಮ (೨)
ಯೇಸು ಪ್ರೀತಿಯು ಎಂದಿಗೂ ನಿಜವಮ್ಮ (ನನ್) (೨)
||ಲೋಕ||



ಲೋಕವೆಲ್ಲ ಮಾಯವಮ್ಮ, ಲೌಕಿಕ ಜೀವನ ಮರಣವಮ್ಮ,
ಬಾಳುವುದು ಬಲು ಆಸೆ, ನಾಳೆಯ ಬದುಕೆ ಸ್ಥಿರವಲ್ಲಮ್ಮ ,
ನಿನ್ನಿಂದ ಕರ್ತನು, ಏನನ್ನೂ ಬಯಸನು (೨)
ವಿಶ್ವಾಸ ಒಂದೆ ಸಾಕಮ್ಮ, ನಿನ್ನ ವಿಶ್ವಾಸ ಒಂದೆ ಸಾಕಮ್ಮ
||ಲೋಕ||
ಪ್ರೀತಿಯೊಂದು ಋಣವಮ್ಮ, ಶಾಶ್ವತ ಪ್ರೀತಿಯ ಮರೆವರಮ್ಮ,
ಬಂಡುತನಕ್ಕೆ ದಾಸರಾಗಿ ನೆರೆಯವರ ತ್ಯಜಿಸ್ವರಮ್ಮ,
ಏನೆಂದು ಹಾಡಲಿ, ಶಾಶ್ವತ ಪ್ರೇಮವೆಲ್ಲಿ (೨)
ನನ್ನೇಸು ಪ್ರೀತಿಯೆ ನಿಜವಮ್ಮ ನನ್ನ ಯೇಸುವಿನ್ ಪ್ರೀತಿಯೆ ನಿಜವಮ್ಮ
||ಲೋಕ||

Posted on
  • Song
  • Name :
  • E-mail :
  • Song No

© 2023 Waytochurch.com