• waytochurch.com logo
Song # 19068

Nanu jivadinadiruva dinavella ನಾನು ಜೀವದಿಂದಿರುವ ದಿನವೆಲ್ಲ


ನಾನು ಜೀವದಿಂದಿರುವ ದಿನವೆಲ್ಲ ನಿನ್ನ ಹೊಗಳಿ ಹಾಡುವೆ
ನನ್ನ ಪೂರ್ಣ ಮನಸ್ಸಿನಿಂದಲೆ ನಿನ್ನ ಎಂದಿಗೂ ಸ್ತುತಿಸುವೆ ||
|| ನನಗಾಗಿ ಪ್ರಾಣ ಕೊಟ್ಟ ದೇವರು ನೀನೆ
ನಿನ್ನ ಪ್ರೀತಿಯ ಬಿಟ್ಟು ಅಗಲಿ ನಾನೆಲ್ಲಿಗೆ ಹೋಗಲಿ
ನನ್ನ ಜೀವಮಾನವೆಲ್ಲಾ ನಿನ್ನ ಸ್ತುತಿಸಿ ಹಾಡುವೆ
ಕೊನೆಯವರೆಗೂ ಹೇಳುವೆ ಯೇಸು ಒಳ್ಳೆವನೆಂದು ||
ಒಳ್ಳೆಯವ ನೀನು ಒಳ್ಳೆಯವ
ಒಳ್ಳೇದನ್ನೆ ನನಗೆ ಮಾಡುವವ
ಒಳ್ಳೆಯವ ನೀನು ಒಳ್ಳೆಯವ
ಒಳ್ಳೇದನ್ನೆ ನನಗೆ ಮಾಡುವವ
1.ನಾನು ಬದುಕಿ ಬಾಳಲೆಂದೆಒಪ್ಪಿಸಿಕೊಟ್ಟೆ ನಿನ್ನನೆ
ಬಾಧೆಗೆ ಒಳಪಡಿಸಿದೆ ನಿನ್ನ ದೇಹವ ನನಗಾಗಿ ||
ನಿನ್ನ ಪ್ರೀತಿ ದೊಡ್ಡದು ನಿನ್ನ ಪ್ರೀತಿ ದೊಡ್ಡದು ||
ನಿನ್ನ ಪ್ರೀತಿಗೆ ಕೊನೆಯೇ ಇಲ್ಲ
ನಿನ್ನ ಕೃಪೆಯು ದೊಡ್ಡದು ನಿನ್ನ ಕೃಪೆಯು ದೊಡ್ಡದು ||
ಕೃಪೆಯಾದ ಯೇಸುವೆ… || ಒಳ್ಳೆಯವ
2.ನನ್ನ ಪಾಪವ ನಿನ್ನ ದೇಹದಿ
ಹೊತ್ತುಕೊಂಡು ತೀರಿಸಿದೆ
ಹೊಡೆಸಿಕೊಂಡೆ ನೀ ನನ್ನ ರೋಗವ ನೀಗಲು || ನಿನ್ನ ||
3.ಶಾಪದ ಮುಳ್ ಮುಕುಟವ
ನಿನ್ನ ಶಿರಸಲ್ಲಿ ಹೊತ್ತುಕೊಂಡೆ
ಶಾಪವಾದೆ ನೀ ನನ್ನ ಆಶೀರ್ವದಿಸಲು || ನಿನ್ನ ಪ್ರೀತಿ
4.ನನ್ನ ದರಿದ್ರವನ್ನು
ನಿನ್ನ ಮೇಲೆ ಹೊತ್ತುಕೊಂಡೆ
ನಿನ್ನ ಆಶೀರ್ವಾದ ನನ್ನ ಬಾಳಲ್ಲಿ ನೀಡಿದೆ || ನಿನ್ನ ||

nanu jivadindiruva dinavella ninna hogaḷi haḍuve
nanna purṇa manas’sinindale ninna endigu stutisuve ||
|| nanagagi praṇa koṭṭa devaru nine
ninna pritiya biṭṭu agali nanellige hogali
nanna jivamanavella ninna stutisi haḍuve
koneyavaregu heḷuve yesu oḷḷevanendu ||
oḷḷeyava ninu oḷḷeyava
oḷḷedanne nanage maḍuvava
oḷḷeyava ninu oḷḷeyava
oḷḷedanne nanage maḍuvava
1.nanu baduki baḷalende’oppisikoṭṭe ninnane
badhege oḷapaḍiside ninna dehava nanagagi ||
ninna priti doḍḍadu ninna priti doḍḍadu ||
ninna pritige koneye illa
ninna kr̥peyu doḍḍadu ninna kr̥peyu doḍḍadu ||
kr̥peyada yesuve… || oḷḷeyava
2.nanna papava ninna dehadi
hottukoṇḍu tiriside
hoḍesikoṇḍe ni nanna rogava nigalu || ninna ||
3.sapada muḷ mukuṭava
ninna sirasalli hottukoṇḍe
sapavade ni nanna asirvadisalu || ninna priti
4.nanna daridravannu
ninna mele hottukoṇḍe
ninna asirvada nanna baḷalli niḍide || ninna ||


                                
Posted on
  • Song
  • Name :
  • E-mail :
  • Song No

© 2023 Waytochurch.com