nanu ghora papiyagiruve yesu ನಾನು ಘೋರ ಪಾಪಿಯಗಿರುವೆ ಯೇಸು
ನಾನು ಘೋರ ಪಾಪಿಯಗಿರುವೆ
ಯೇಸು ನನ್ನ ಪಾಪ ಘೋರವು
1.ನೋಡುವುದಕ್ಕೆ ಒಳ್ಳೆವನಲ್ಲ
ಕಾಣುವುದಕ್ಕೆ ಒಳ್ಳೆ ಗುಣಗಳು ಇಲ್ಲ
ನನ್ನ ಪಾಪವು ಕಡು ಕೆಂಪಾಗಿದ್ದರು
ಹಿಮದಷ್ಟು ಬೆಳ್ಳಗೆ ನೀ ಮಾಡಿದೆ – ನಾನು
2.ದೀನನು ನಾ ದರಿದ್ರನು
ನಿನ್ನಾ ಕಾರ್ಯಕೆ ಯೋಗ್ಯನಲ್ಲ
ನನ್ನಂತ ಪಾಪಿಯ ಹುಡುಕುತ್ತಾ ಬಂದು
ಎದೆಯಲ್ಲೆ ಅಪ್ಪಿಕೊಂಡೆ – ನಾನು
3.ಅಂಗೈಯಲ್ಲಿ ಚಿತ್ರಿಸಿರುವೆ
ನಿನ್ನಾ ಪವಿತ್ರ ಕೈಗಳಲ್ಲಿ
ನಿನ್ನಾ ನಿರ್ಮಲ ಪ್ರೇಮಕೆ
ಏನೆಂದು ನಾ ವರ್ಣಿಸಲಿ – ನಾನು