na ninnanne aradhisuve ನಾ ನಿನ್ನನ್ನೇ ಆರಾಧಿಸುವೇ
ನಾ ನಿನ್ನನ್ನೇ ಆರಾಧಿಸುವೇ
ನಾ ನಿನ್ನನ್ನೇ ಪ್ರಾರ್ಥಿಸುವೆ (ಸೇವಿಸುವೇ)
ಕಷ್ಟವು ಬಂದರೂ ನಷ್ಟವೂ ಆದರೂ
ನಿನ್ನ ಸೇವೆಯ ಮಾಡುವೆನು || 2 ||
ಸತ್ತಂತ ದೇಹ ಎಲೀಷನ ಶವಕ್ಕೆ
ತಾಗಲಿದ ತಕ್ಷಣವೇ ಮರು ಜೀವ ಬಂದಿತು || 2 ||
|| ನಾ ನಿನ್ನನ್ನೇ ||
ನಿನ್ನ ಕೃಪೆಯಿಂದ ನನ್ನ ಶೃಂಗರಿಸು
ನಿನ್ನ ಕರವೇ ನನಗೆ ಆಧಾರ || 2 ||
ನನ್ನ ಘನತೆಯು ವೃದ್ಧಿಯಾಯಿತು
ನನ್ನ ಇಷ್ಟಾರ್ಥ ಪೂರೈಸಿದೆಯಲ್ಲಾ || 2 ||
|| ನಾ ನಿನ್ನನ್ನೇ ||
ಒಂದನ್ನೇ ಬೇಡುವೆ ಅದನ್ನೇ ಬಯಸುವೆ
ನನ್ನ ದೇಶವನ್ನು ರಕ್ಷಿಸು ಯೇಸಯ್ಯಾ || 2 ||
ನರಕದ ಬಾಗಿಲು ಮುಚ್ಚಲ್ಪಡಲಿ
ಪರಲೋಕ ದ್ವಾರವು ತೆರೆಯಲ್ಪಡಲಿ || 2 ||
|| ನಾ ನಿನ್ನನ್ನೇ ||