parisudha athmane pavana athmane ಪರಿಶುದ್ಧ ಅತ್ಮನೇ ಪಾವನ ಅತ್ಮನೇ
ಪರಿಶುದ್ಧ ಅತ್ಮನೇ ಪಾವನ ಅತ್ಮನೇ
ಚಲಿಸುವ ಅತ್ಮನೇ ನಮ್ಮ ಮೇಲಿಳಿದು ಬಾ
ಬಾ… ಪವಿತ್ರ ಅತ್ಮನೇ
ಬಾ … ಪ್ರಿಯ ಕರ್ತನೇ
1.ಬಳಲಿದ ಸಭೆಗಳ ಮೇಲೆ
ನಿನ್ ಆತ್ಮ ಸ್ಪರ್ಷಿಸಲಿ
ಒಣಗಿದ ಎಲುಬುಗಳಲ್ಲಿ
ನಿನ್ ಜೀವ ಶ್ವಾಸ ಹೊರಡಲಿ
ಅತ್ಮನೇ .. ಅತ್ಮನೇ … ಜೀವವಾಗಿ ಇಳಿದುಬಾ
||ಪರಿಶುದ್ಧ ಅತ್ಮನೇ||
2.ನಿನ್ನ ಆತ್ಮವ ಸುರಿಸು
ಹಿಂಗಾರು ಮುಂಗಾರು ಮಳೆಯಾಗಿ
ಎಲ್ಲಾ ದೇವಜನರು ನಿನ್ ವಾಕ್ಯದ ಬಲ ಹೊಂದಲಿ
ಸ್ಪರ್ಷಿಸು ಸ್ಪರ್ಷಿಸು ಎಲ್ಲಾ ದೇಶವನ್ನು
||ಪರಿಶುದ್ಧ ಅತ್ಮನೇ||
3.ಪಾಪದಿಂದ ತುಂಬಿದ
ಹೃದಯವ ಶುದ್ಧಿಕರಿಸು
ರೋಗದಿಂದ ನರಳುವ ಹೃದಯವ ಹರ್ಷಗೊಳಿಸು
ನೊಂದಿದ ಹೃದಯವ ಸಂತೈಸುವ ಆತ್ಮನೇ ಬಾ ….
||ಪರಿಶುದ್ಧ ಅತ್ಮನೇ||