paralokadalliruva namma tandeye ಪರಲೋಕದಲ್ಲಿರುವ ನಮ್ಮ ತಂದೆಯೇ ’
ಪರಲೋಕದಲ್ಲಿರುವ ನಮ್ಮ ತಂದೆಯೇ
ನಿನ್ನ ನಾಮ ಪರಿಶುದ್ಧವೆಂದು ಎಣಿಸಲ್ಪಡಲಿ ||2||
ನಿನ್ನ ರಾಜ್ಯವು ಬರಲಿ ನಿನ್ನ ಚಿತ್ತವು ನೆರವೇರಲಿ ||2||
1.ಪರಲೋಕದಲ್ಲಿ ನಿನ್ನ ಚಿತ್ತವು ನೆರವೇರುವ ಹಾಗೆ
ಭೂಲೋಕದಲ್ಲಿಯೂ ನೆರವೇರಲಿ ||2||
ನಮ್ಮ ಅನುದಿನದ ಆಹಾರವು ಈ ಹೊತ್ತು ನಮಗೆ ದಯಪಾಲಿಸು
ನಾವು ಶೋಧನೆಗೆ ಸೇರದಂತೆ ಎಲ್ಲಾ ಕೇಡಿನಿಂದ
ತಪ್ಪಿಸು ||2||
2.ಎಲ್ಲ ದೇಶದ ಅಂದಕಾರವು ನೀಗಿ ಹೋಗಲಿ
ಸಮಾಧಾನದ ಶುಭವಾರ್ತೆ ಸಾರಲ್ಪಡಲಿ ||2||
ಈ ಭಾರತ ದೇಶವು ನಿಮಗೆ ಸ್ವಂತವಾಗಲಿ
ಕೋಟಿ ಕೋಟಿ ಜನಗಳಿಗೆ ರಕ್ಷಣೆ ಎಂಬ ಕಿರೀಟ ಒದಗಲಿ ||2||
3.ಎಲ್ಲ ಸಭೆ ಸೇವಕರ ಮನಸ್ಸು ಒಂದಾಗಿರಲಿ
ಕರೆದಾತನೆ ಕಾರ್ಯಮಾಡಿ ಪೂರೈಸಲಿ ||2||
ಅವರು ಭೂಮಿಗೆ ಉಪ್ಪಾಲಿ ಲೋಕಕ್ಕೆ ಬೆಳಕಾಗಲಿ
ನಿತ್ಯ ಜೀವಕ್ಕಾಗಿ ದುಡಿದು ಪರಲೋಕ ರಾಜ್ಯ ಸೇರಲಿ ||2||
paralokadalliruva nam’ma tandeye
ninna nama parisud’dhavendu eṇisalpaḍali ||2||
ninna rajyavu barali ninna chittavu neraverali ||2||
1.paralokadalli ninna chittavu neraveruva hage
bhulokadalliyu neraverali ||2||
nam’ma anudinada aharavu e hottu namage dayapalisu
navu shodhanege seradante ella keḍininda
tappisu ||2||
2.ella deshada andakaravu nigi hogali
samadhanada shubhavarte saralpaḍali ||2||
e bharata desavu nimage svantavagali
koṭi koṭi janagaḷige rakṣhaṇe emba kiriṭa odagali ||2||
3.ella sabhe sevakara manas’su ondagirali
karedatane karyamaḍi puraisali ||2||
avaru bhumige uppali lokakke beḷakagali
nitya jivakkagi duḍidu paraloka rajya serali ||2||