pavitratmane priya kartane ಪವಿತ್ರಾತ್ಮನೆ ಪ್ರಿಯ ಕರ್ತನೆ
ಪವಿತ್ರಾತ್ಮನೆ ಪ್ರಿಯ ಕರ್ತನೆ
ಅವರಿಸಿ ನಡೆಸಯ್ಯಾ
ನಿನ್ನ ಮಾರ್ಗವ ತಿಳಿಸಯ್ಯಾ
ನಿನ್ನ ಚಿತ್ತ ಕಲಿಸಯ್ಯಾ
ನಿನ್ನ ವಾಕ್ಯದ ಬೆಳಕಿನಲೇ
ದಿನದಿನವು ನಡೆಸಯ್ಯಾ
1.ಕನ್ಮಣಿಯಂತೆ ಕಾಯಬೇಕಯ್ಯಾ
ಹದ್ದಿನಂತೆ ಹೋರಬೇಕಯ್ಯಾ
ನಿನ್ನ ರೆಕ್ಕೆಯ ನೆರಳಲ್ಲಿಯೇ ಎಂದೆಂದು
ಇರಿಸಯ್ಯಾ
2.ಕಡುಬಿಸಿಲಲ್ಲಿ ತಣ್ಣನೆ ನೆರಳೇ
ಬಿರುಗಾಳಿಗೆ ಆಶ್ರಯವೇ
ಗೊರಮಳೆಯಲ್ಲೂ ಕಾಯುವವನೇ
ನನ್ನಯ ಗುಡಾರವೇ
3.ನ್ಯಾಯತೀರ್ಪಿನ ಆತ್ಮನಾದವನೇ
ದಹಿಸುವ ಪವಿತ್ರಾತ್ಮನೇ
ಪಾಪ ತೊಳೆದು ಶುದ್ಧ ಮಾಡುವ
ಪಾವನ ಪವಿತ್ರಾತ್ಮನೇ