parisuddhane ninnanardhisuve ಪರಿಶುದ್ಧನೆ ನಿನ್ನನಾರಾಧಿಸುವೆ
ಪರಿಶುದ್ಧನೆ ನಿನ್ನನಾರಾಧಿಸುವೆ
ಇಂದು ಎಂದೆಂದಿಗೂ
ನನ್ನನೆ ನಾ ನಿನಗರ್ಪಿಸುವೆ
ಸಜೀವ ಬಲಿಯಾಗಿ ||
1 ) ಯೆಹೋವ ಯೀರೆ ನೀನೆ
ಒದಗಿಸುವ ಕರ್ತನೆ
ಯೆಹೋವ ರಾಫ ನೀನೆ
ಸೌಖ್ಯದಾಯಕನೆ ||
ಆರಾಧನೆ ನಿನಗೆ ಆರಾಧನೆ ಎಂದೆಂದು ||
2 ) ಯೆಹೋವ ರೂವ ನೀನೆ
ನನ್ನ ಒಳ್ಳೆ ಕುರುಬನೆ
ಯೆಹೋವ ನಿಸ್ಸಿ ನೀನೆ
ಜಯವ ಕೊಡುವಾತನೆ ||
ಆರಾಧನೆ ನಿನಗೆ ಆರಾಧನೆ ಎಂದೆಂದು ||
3 ) ಯೆಹೋವ ಶಮ್ಮಾ ನೀನೆ
ಜೊತೆಯಲ್ಲಿ ಇರುವಾತನೆ
ಯೆಹೋವ ಶಾಲೋಮ್ ನೀನೆ
ಸಮಾಧಾನ ಕೊಡುವಾತನೆ ||
ಆರಾಧನೆ ನಿನಗೆ ಆರಾಧನೆ ಎಂದೆಂದು ||