• waytochurch.com logo
Song # 19340

maya lokadinda ಮಾಯಾ ಲೋಕದಿಂದ


ಮಾಯಾ ಲೋಕದಿಂದ ನನ್ನ ಮಹಿಮೆ ಲೋಕಕ್ಕೆ
ನಡೆಸಿದ ಯೇಸುವೆ ನಿನಗೆ ವಂದನೆ ||
|| ಧನ್ಯನಾದೆ ನಾನು ನಿನ್ನ ಪ್ರೀತಿಯ ಕಂಡು
ಪರವಶನಾದೆ ನಿನ್ನ ಮಹಿಮೆಯ ಕಂಡು ||
1.ಮಾಯಾಲೋಕದಲ್ಲಿ ನಾನು ಮೋಸ ಹೋಗಿದ್ದೆ
ಮರಣ ಶಾಪ ಮಾರ್ಗದಲ್ಲಿ ನಾನು ಇದ್ದೆ ||
ಯಾರು ಕರೆಯಲಿಲ್ಲ ನನ್ನ ಯಾರು ಅರಿಯಲಿಲ್ಲ ||
ಯೇಸುವೇ ನನ್ನ ಕರೆದೆ || ಧನ್ಯ ||
2.ಮಾಯಾಜಾಲದಲ್ಲಿ ನಾನು ಸಿಕ್ಕಿಬಿದ್ದೆ
ಯಾರು ಬಿಡಿಸುವವರು ಎಂದು ಕಾಯುತ್ತಿದ್ದೆ ||
ಯಾರು ಬಿಡಿಸಲಿಲ್ಲ ಬಳಿ ಯಾರು ಬರಲು ಇಲ್ಲ ||
ಯೇಸುವೇ ನನ್ನ ಬಿಡಿಸಿದೆ || ಧನ್ಯ ||
3.ಮಾಯಲೋಕದಲ್ಲಿ ನಾನು ದಿಕ್ಕು ಕಾಣದೆ
ಅಗಲವಾದ ಮಾರ್ಗದಲ್ಲಿ ಅಲೆಯುತ್ತಿದ್ದೆ ||
ನನ್ನ ನೋಡಿ ಯೇಸುವೇ ಓಡಿಬಂದೆ ||
ತಾಯಿಯಂತೆ ಅಪ್ಪಿಕೊಂಡೆ || ಧನ್ಯ ||

maya lokadinda nanna mahime lokakke
naḍesida yesuve ninage vandane ||
|| dhan’yanade nanu ninna pritiya kaṇḍu
paravasanade ninna mahimeya kaṇḍu ||
1.mayalokadalli nanu mosa hogidde
maraṇa sapa margadalli nanu idde ||
yaru kareyalilla nanna yaru ariyalilla ||
yesuve nanna karede || dhan’ya ||
2.mayajaladalli nanu sikkibidde
yaru biḍisuvavaru endu kayuttidde ||
yaru biḍisalilla baḷi yaru baralu illa ||
yesuve nanna biḍiside || dhan’ya ||
3.mayalokadalli nanu dikku kaṇade
agalavada margadalli aleyuttidde ||
nanna noḍi yesuve oḍibande ||
tayiyante appikoṇḍe || dhan’ya ||

Posted on
  • title
  • Name :
  • E-mail :
  • Type

© 2019 Waytochurch.com