vijayada jivanava bhuviyali ವಿಜಯದ ಜೀವನವ ಭುವಿಯಲಿ
ವಿಜಯದ ಜೀವನವ ಭುವಿಯಲಿ ತಂದನು
ಸಾವಿನ ಭಯವನ್ನು ದೂರ ಸರಿಸಿದನು
ಮನುಕುಲಕೆ ಹರುಷವನು
ಜಗದಲಿ ತಂದಿಹನು
1.ಉರಿಳಿತು ಬಂಡೆಯು ನಮ್ಮಯ ಜೀವಿತದಿ
ಸರಿಸಿತು ಭಯವನ್ನು
ನೀಡಿತು ಶಾಂತಿಯನು
ಸಂತಸ ವಾರ್ತೆಯನ್ನು
ನಮಗಾಗಿ ನೀಡಿದೆನೀ
ಸ್ಮರಿಸುವೆವು ಹಾಡುವೆವು
ಮನದಿ ಕೊಂಡಾಡುವೆವು – ವಿಜಯದ
2.ಸುಮದುರ ಶಬ್ದವು ನೀಗಿತು ಕಳವಳವ
ಜೀವನ ಮಾರ್ಗಕ್ಕೆ
ನೀಡಿತು ಸಾಂತ್ವನವ
ಈ ಜಯ ವಾರ್ತೆಯನು
ಎಲ್ಲೆಡೆ ಸಾರುವೆವು
ಜೀವಿಸುವೆವು ನಿನಗಾಗಿಯೇ
ಸಾಕ್ಷಿಯ ನೀಡುವೆವು – ವಿಜಯದ