sajiva yagnavagi ಸಜೀವ ಯಗ್ನವಾಗಿ
ಸಜೀವ ಯಗ್ನವಾಗಿ… ನನ್ ದೇಹ ಅರ್ಪಿಸುವೇ…
ಕೃಪೆಯ ನೀಡಿರುವೇ… //2//
ಅರ್ಪಿಸುವೇ ಕರ್ತನೇ, ನೆಲಸಯ್ಯ ನಿರಂತರವೂ… //2//
ಸಜೀವ ಯಗ್ನವಾಗಿ… ನನ್ ದೇಹ ಅರ್ಪಿಸುವೇ…
ಕೃಪೆಯ ನೀಡಿರುವೇ…
ಲೋಕಮಾರ್ಗದಿ ನಡೆಯೆನು ನಾ,
ಲೋಕದ ವೇಷವ ಧರಿಸೆನು ನಾ… //2//
ನೂತನ ಮನಸ್ಸನ್ನು ಹೊಂದಿ, ನಿನ್ ಚಿತ್ತ
ಅರಿತು ಬಾಳಬೇಕು… //2//
ಅರ್ಪಿಸುವೇ ಕರ್ತನೇ, ನೆಲಸಯ್ಯ ನಿರಂತರವೂ… //2//
ಸಜೀವ ಯಗ್ನವಾಗಿ… ನನ್ ದೇಹ ಅರ್ಪಿಸುವೇ…
ಕೃಪೆಯ ನೀಡಿರುವೇ…
ನನ್ನ ಹೃದಯ ಧ್ಯಾನವೆಲ್ಲ, ನಿನಗೆ ಸಮರ್ಪಕವಾಗಿರಲಿ… //2//
ನನ್ ಬಾಯ ಮಾತು ಎಲ್ಲ, ನಿನಗೆ ಮೆಚ್ಚುಗೆ ಆಗಿರಲಿ… //2//
ಅರ್ಪಿಸುವೇ ಕರ್ತನೇ, ನೆಲಸಯ್ಯ ನಿರಂತರವೂ… //2//
ಸಜೀವ ಯಗ್ನವಾಗಿ… ನನ್ ದೇಹ ಅರ್ಪಿಸುವೇ…
ಕೃಪೆಯ ನೀಡಿರುವೇ…
ನನ್ ಆಸೆ ಬಯಕೆ ನಿನದಾಗಲಿ,
ನಿನ್ ಮೇಲೆ ಪ್ರೀತಿಯೂ ಹೆಚ್ಚಾಗಲಿ… //2//
ಉನ್ನತ ಸೇವೆ ಮಾಡಬೇಕು, ನನ್ ಜೀವ ಇರುವರೆಗೂ… //2//
ನಿನಗೆ ನಾ ಸ್ವಂತ, ನಿನ್ನೊಂದಿಗೆ ಇರುವೇ,
ಜೀವಂತ ದಿನವೆಲ್ಲ, ನಿನ್ ಚಿತ್ತಮಾಡುವೆನು… //2//
ಅರ್ಪಿಸುವೇ ಕರ್ತನೇ, ನೆಲಸಯ್ಯ ನಿರಂತರವೂ… //2//
ಸಜೀವ ಯಗ್ನವಾಗಿ… ನನ್ ದೇಹ ಅರ್ಪಿಸುವೇ…
ಕೃಪೆಯ ನೀಡಿರುವೇ…