sakaladallu unnata nine sarva dallu ಸಕಾಲದಲ್ಲು ಉನ್ನತ ನೀನೆ ಸರ್ವದಲ್ಲು
ಸಕಾಲದಲ್ಲು ಉನ್ನತ ನೀನೆ
ಸರ್ವದಲ್ಲು ಮೇಲಾದವ ನೀನೆ
ಆದರೆ ಕರುಣೆಯೊಳ್ ಐಶ್ವರ್ಯನೆ
ನಾ ನಿನ್ನನ್ನೆ ದೃಷ್ಟಿಸುವೇ
ಸಹಾಯ ಬೇಕು ದೇವಾ ಸಹಾಯ ಮಾಡು ದೇವಾ
ನನ್ನಿಂದಾಗದು ನಿನ್ನಿಂದ ಸಾಧ್ಯ
ಸ್ವಯ ಬಲದಿ ನನ್ನಿಂದ ಏನು ಆಗದು
ಯಾವ ತಡೆಯನ್ನು ನಾನು ದಾಟಲಾರೆನು
ಶಾರೀರ ಭಾವವು ನನ್ನ ಗೆಲ್ಲುತ್ತಿದೆ
ನಿನ್ ಆತ್ಮದಿ ನನ್ನ ಬಲಪಡಿಸು
ನನ್ ವಿವೇಕದಿ ಯಾವುದು ಆಗದು
ನನ್ ಸಾಮರ್ಥ್ಯದಿ ಜೀವಿಸಲಾಗದು