sambhramadindale haduvenu nanu ಸಂಭ್ರಮದಿಂದಲೇ ಹಾಡುವೆನು ನಾನು
ಸಂಭ್ರಮದಿಂದಲೇ ಹಾಡುವೆನು ನಾನು
ಯೇಸು ರಕ್ಷಕನ ಹೋಗಳುವೆನು
1.ಕತ್ತಲೆ ಮಾರ್ಗದಿ ನಡೆಯುವ ನನ್ನನ್ನು
ಕನಿಕರದಿಂದಲೇ ಕರೆದಿದೆ ದೇವಾ
ತಪ್ಪಿತ ಹೆಜ್ಜೆಯ ಗಮನಿಸಿ ನನ್ನ ಪ್ರಭು
ನಡೆಸಿದಿ ಬೆಳಕಿನ ಹಾದಿಯಲ್ಲಿ – ಸಂಭ್ರಮದಿಂದಲೇ
2.ಯೇಸುವೆ ನನಗೆ ಜೀವದ ಬುಗ್ಗೇ
ಯೇಸುವೆ ನನಗೆ ಜೀವದ ರೊಟ್ಟಿ
ಯೇಸುವೆ ನನಗೆ ಸ್ವರ್ಗದ ಮಾರ್ಗ
ಯೇಸುವೆ ನನಗೆ ಸರ್ವಸ್ವವು – ಸಂಭ್ರಮದಿಂದಲೇ