sarva srusti galu stuthi haduttide ಸರ್ವ ಸೃಷ್ಟಿಗಳು ಸ್ತುತಿ ಹಾಡುತ್ತಿದೆ
ಸರ್ವ ಸೃಷ್ಟಿಗಳು ಸ್ತುತಿ ಹಾಡುತ್ತಿದೆ
ಯೇಸುವೇ ನಿಮಗೆ ಸ್ತೋತ್ರ
ಜೀವರಾಶಿಗಳೇಲ್ಲವು ಸ್ತುತಿಸುತ್ತಿದೆ
ಯೇಸುವೇ ನಿಮಗೆ ಸ್ತೋತ್ರ
ಹಲ್ಲೇಲೂಯ ಹಲ್ಲೇಲೂಯ ಹೊಸ ನ್ನ
1.ಸೂರ್ಯ ಚಂದಿರರು ಎಲ್ಲತಾರೆಗಳು
ಬೆಳಗುತ್ತ ಹಾಡಿದೆ ಸ್ತೋತ್ರ
ಮಿಂಚು ಗುಡಗುತ್ತಲೆ ಆರ್ಭಟಿ ಸುತ್ತಲೆ ಹಾಡಿದೆ
ಯೇಸುವೇ ಸ್ತೋತ್ರ – ಹಲ್ಲೇಲೂಯ
2.ಬೆಟ್ಟ ಗುಡ್ಡಗಳು ತಲೆ ಎತ್ತುತಲೆ
ಹಾಡಿದೆ ಯೇಸುವೇ ಸ್ತೋತ್ರ
ಜಲರಾಶಿಗಳು ಜುಳು ಜುಳು ಎನ್ನುತ
ಹರಿಯುತ್ತ ಹಾಡಿದೆ ಸ್ತೋತ್ರ – ಹಲ್ಲೇಲೂಯ
3.ಗಿಡ ಮರಗಳೆಲ್ಲ ತುಗಾಡುತ್ತಲೆ ಹಾಡಿದೆ
ಯೇಸುವೇ ಸ್ತೋತ್ರ
ವನ ಪುಷ್ಪಗಳು ಪರಿಮಳ ಸೂಸಿ
ಹರಡುತ ಹಾಡಿದೆ ಸ್ತೋತ್ರ – ಹಲ್ಲೇಲೂಯ
4.ಸರ್ವ ಪಕ್ಷಿಗಳು ಚಿಲಿ ಪಿಲಿ ಎನ್ನುತ
ಹಾರುತ್ತಾ ಹಾಡಿದೆ ಸ್ತೋತ್ರ
ಮೃಗ ಚರಗಳೇಲ ಕೂಗಿ ಗರ್ಜಿಸುತ
ಮೊಳಗಿದೆ ಯೇಸುವೇ ಸ್ತೋತ್ರ – ಹಲ್ಲೇಲುಯ