srustikartane ni nanna ಸೃಷ್ಟಿಕರ್ತನೆ ನೀ ನನ್ನ
ಸೃಷ್ಟಿಕರ್ತನೆ ನೀ ನನ್ನ ರಕ್ಷಕನು
ಸರ್ವಾಲೋಕಕ್ಕೇ ನೀನೇ ಪಾಲಕನು ||
ಸರ್ವವನ್ನು ನೀಡಿದೆ ನನಗಾಗಿ
ಸಲ್ಲಿಸುವೆ ನನ್ನನ್ನೇ ನಿನಗಾಗಿ ||
ದೇವನೆ ನಿನ್ನನ್ನೇ ನೋಡುವೆ
ಓ ಯೇಸುವೆ ನಿನ್ನ ನಾಮವ ಕೂಗುವೆ ||
1 ) ಸಮುದ್ರದ ಮುಂದೆ ನಡುಗಿನಿಂತೆ
ಸಮುದ್ರವ ಸೀಳಿ ನಡೆಸಿರುವೆ ||
ದಾಹದಿ ನಾನು ದಣಿದಿರಲು
ಸಿಹಿಯಾದ ನೀರನ್ನು ನೀಡಿರುವೆ ||
2 ) ಮರುಭೂಮಿಯಲ್ಲಿ ನಾ ಮೊರೆಯಿಡಲು
ಮನ್ನವ ನೀಡಿ ಪೋಷಿಸಿದೆ ||
ಹಗಲಿನಲ್ಲಿ ನನ್ನ ಆಧರಿಸಿದೆ
ಇರುಳಿನಲ್ಲಿ ನನ್ನ ಮುನ್ನಡೆಸಿದೆ ||