nanna kayvava ನನ್ನ ಕಾಯ್ವವ
ನನ್ನ ಕಾಯ್ವವ ತುಂಬಾ ಒಳ್ಳೆಯವ
ನನ್ನ ಕಾಯ್ವವ ಸರ್ವಶಕ್ತನು
ನನ್ನ ಕಾಯ್ವವ ನಿದ್ರೆಯ ಮಾಡನು
ನನ್ನ ಕಾಯ್ವವ ಬಿಡನು ಕೈಯನು
ನನ್ನ ಕಾಯ್ವವ ಎಂದಿಗೂ ಮರೆಯನು
|| ಕಾದವನು ಕಾಯುವನು ಕರುಣೆಯಿಂದ
ಕಾದವನು ಕಾಯುವನು ಪ್ರೀತಿಯಿಂದ || ನನ್ನ
1 ) ದಾರಿ ಕಾಣದೆ ಊರೆಲ್ಲಾ ಅಲೆದೆ
ದಾರಿಯ ತೋರಿ ಬಿಡಿಸಿ ಕಾದಿರುವೆ ||
ನಿನ್ನ ಪ್ರೀತಿ ದೊಡ್ಡದು ನಿನ್ನ ಕೃಪೆಯು ದೊಡ್ಡದು ||
ನನ್ನ ನಡೆಸೋ ಕುರುಬ ನೀನೇ ||
2 ) ಪಾಪ ಶಾಪದಿ ಸಿಲುಕಿದ ನನ್ನ
ನಿನ್ನ ರಕ್ತ ಸುರಿಸಿ ಬಿಡಿಸಿ ಕಾದಿರುವೆ ||
ನಿನ್ನ ಪ್ರೀತಿ ದೊಡ್ಡದು ನಿನ್ನ ಕೃಪೆಯು ದೊಡ್ಡದು ||
ರಕ್ಷಕ ಯೇಸು ನೀನೇ ನನ್ನ ರಕ್ಷಕ ಯೇಸು ನೀನೇ
3 ) ಸೌಖ್ಯವಿಲ್ಲದೆ ವೇಧನೆ ಪಟ್ಟೆ
ವಾಕ್ಯವ ಕಳಿಸಿ ಸೌಖ್ಯವ ನೀಡಿದೆ ||
ನಿನ್ನ ಪ್ರೀತಿ ದೊಡ್ಡದು ನಿನ್ನ ಕೃಪೆಯು ದೊಡ್ಡದು ||
ಗುಣಪಡಿಸುವ ದೇವನು ನೀನೇ
4 ) ಬಡತನದಲ್ಲಿ ಇದ್ದ ನನ್ನನು
ಸಿರಿವಂತನಾಗಿ ಮಾರ್ಪಡಿಸಿದೆ ||
ನಿನ್ನ ಪ್ರೀತಿ ದೊಡ್ಡದು ನಿನ್ನ ಕೃಪೆಯು ದೊಡ್ಡದು ||
ಐಶ್ವರ್ಯದಾಯಕ ನೀನೇ
ನನ್ನ ಐಶ್ವರ್ಯದಾಯಕ ನೀನೇ || ನನ್ನ