nanna olle kuruba ninage aradhane ನನ್ನ ಒಳ್ಳೆ ಕುರುಬ ನಿನಗೆ ಆರಾಧನೆ
ನನ್ನ ಒಳ್ಳೆ ಕುರುಬ ನಿನಗೆ ಆರಾಧನೆ ಮಾಡುವೆ
ನನ್ನ ಒಳ್ಳೆ ಕುರುಬ ನಾ ಮಹಿಮೆ ಸಲಿಸುವೆ
ನನ್ನ ಒಳ್ಳೆ ನಾಯಕ ನಾ ಸ್ತೋತ್ರ ಮಾಡುವೆ
ನನ್ನ ಒಳ್ಳೇ ನಾಯಕ ನಿನ್ನ ಉಪಕಾರ ಸ್ಮರಿಸುವೆ
ನನ್ನ ಒಳ್ಳೆ ಕುರುಬ…
1.ಮಾರ್ಗ ತಪ್ಪಿ ನಡೆದ ನನ್ನನ್ನು ನಿನ್ನ ದಯವನೇ
ತೋರಿಸಿರುವೆ (2)
ತಂದೆ ತಾಯಿ ತೊರೆದು ಬಿಟ್ಟರು ನೀ ನು ನನ್ನನು ಸೇರಿಸಿಕೊಂಡೆ
(2)- ನನ್ನ ಒಳ್ಳೆ
2.ಆಸ್ತಿ-ಪಾಸ್ತಿ ಬೇಡವಯ್ಯ ಚಿನ್ನ ಬೆಳ್ಳಿ ಬೇಡವಯ್ಯ (2)
ಸಾವಿರಾರು ಚಿನ್ನ ಬೆಳ್ಳಿ ನಾಣ್ಯಕಿಂತಲು ಅತಿ ಮಧುರನೆ (2)
– ನನ್ನ ಒಳ್ಳೆ
3.ರೋಗದಿಂದ ನಾ ಅಳುತಿರುವಾಗ ನಿನ್ನ ರಕ್ತದಿ
ತೊಳೆದೆ ತಂದೆ (2)
ನಿನ್ನ ಶಿಲುಬೆ ದೃಷ್ಠಿಸಿದಾಗ ನನಗೆ ಹೊಸ ಜೀವ ದೊರಕಿತ್ತು (2)
– ನನ್ನ ಒಳ್ಳೆ