tande maga parisudda atmane ತಂದೆ ಮಗ ಪರಿಶುದ್ದ ಆತ್ಮನೆ
ತಂದೆ ಮಗ ಪರಿಶುದ್ದ ಆತ್ಮನೆ
ಆರಾಧನೆ ನಿನ್ನ ಆರಾಧನೆ
ಭೂಪರ ಲೋಕಗಳ ಒಡೆಯನೆ
ಆರಾಧನೆ ನಿನ್ನ ಆರಾಧನೆ
ಸ್ತೋತ್ರ ಮಾನ ಮಹಿಮೆಗೆ
ಯೋಗ್ಯನೆ ಆರಾಧನೆ ನಿನ್ನ ಆರಾಧನೆ
1.ಕ್ಷಮೆಯನ್ನು ಬೇಡಿ ಬರುವವರ
ಎಂದೆಂದಿಗೂ ನಿ ತಳ್ಳಿ ಬಿಡದೇ
ಶಾಶ್ವತ ರಕ್ಷಣೆ ನೀಡಿ
ಆಶ್ರಯ ಗಿರಿಯಾಗುವಿ
2.ದಯಾಪರನೆ ಕರುಣಾಕರನೆ
ಅಗಮ್ಯನೆ ಪರಮಪೂಜ್ಯನೆ
ನಿನ್ನನ್ನು ನಾ ಕಾಣುವ
ಕ್ರಪೆಯನ್ನು ದಯಪಾಲಿಸು
3.ಅಬ್ರಾಹಂ ಇಸಾಕ ಯಾಕೋಬ್ಯರ
ಮಹೋನ್ನತ ತ್ರಯೇಕ ದೇವರೆ
ಆದಿಯು ಅಂತ್ಯವು ನೀನೆ
ನಿನ್ನನ್ನೇ ಕೊಂಡಾಡುವೆ