Ujjivana male beku ಉಜ್ಜೀವನ ಮಳೆ ಬೇಕು
ಉಜ್ಜೀವನ ಮಳೆ ಬೇಕು ನನ್ ಕರ್ತನೆ ||
ನಮ್ಮ ಮೇಲೆ ಸುರಿಸಯ್ಯ ಭಾರತವ ನೆನೆಸಯ್ಯ ||
ಯೇಸುವೆ ಯೇಸುವೇ ನಮ್ಮನು ಅಭಿಷೇಕಿಸು ||
ಅಗ್ನಿಯುಳ್ಳ ಆತ್ಮನಿಂದ ನಮ್ಮನ್ನು
ಅಗ್ನಿಯಾಗಿ ಮಾರ್ಪಡಿಸು || ಉಜ್ಜೀವನ ||
1.ಒಣಗಿದ ಎಲುಬೆಲ್ಲ ಕಟಕಟನೆ ಶಬ್ಧವಾಗಿ
ಒಂದು ದೊಡ್ಡ ಸೈನ್ಯವಾಗಿ ನಿಲಬಾರದೇ ||
ಶ್ವಾಸ ತಂದ ಬಿರುಗಾಳಿ ಬೀಸಬಾರದೇ ||
ಉಜ್ಜೀವನ ದೇಶದಲ್ಲಿ ತರಬಾರದೇ || ಉಜ್ಜೀವನ ||
2.ನಿರೀಕ್ಷೆಗೂ ಮೀರಿದ ಭಯಂಕರ ಕೃತ್ಯಗಳ
ನಡೆಸಿ ನಮ್ ದೇಶವನ್ನು ನೀ ನಡುಗಿಸು ||
ಆತ್ಮನೆ ಪ್ರವಾಹದಂತೆ ನೀ ಚಲಿಸಯ್ಯಾ ||
ಅಂತ್ಯಕಾಲ ಸುಗ್ಗಿಗಾಗಿ ಸಿದ್ಧಮಾಡಯ್ಯಾ ||
3.ಮನುಷ್ಯರನ್ನು ಹಿಡಿಯುವ ಬೆಸ್ತರಾಗಿ ಮಾಡಯ್ಯ
ಆತ್ಮಗಳ ನೀಡದಿದ್ದರೆ ಪ್ರಾಣವನ್ನು ತೆಗೆದುಕೊಳ್ಳಯ್ಯ
ಏನೇ ಬಂದರು ಮುನ್ನುಗ್ಗುವ ಶಕ್ತಿ ನೀಡಯ್ಯಾ
ಒಂದೇ ಬಾಳು ನಿನಗಾಗಿಯೆ ಬಾಳಬೇಕಯ್ಯಾ ||
ujjivana maḷe beku nan kartane ||
nam’ma mele surisayya bharatava nenesayya ||
yesuve yesuve nam’manu abhiṣekisu ||
agniyuḷḷa atmaninda nam’mannu
agniyagi marpaḍisu || ujjivana ||
1.oṇagida elubella kaṭakaṭane sabdhavagi
ondu doḍḍa sain’yavagi nilabarade ||
svasa tanda birugaḷi bisabarade ||
ujjivana desadalli tarabarade || ujjivana ||
2.nirikṣegu mirida bhayaṅkara kr̥tyagaḷa
naḍesi nam desavannu ni naḍugisu ||
atmane pravahadante ni calisayya ||
antyakala suggigagi sid’dhamaḍayya ||
3.manuṣyarannu hiḍiyuva bestaragi maḍayya
atmagaḷa niḍadiddare praṇavannu tegedukoḷḷayya
ene bandaru munnugguva sakti niḍayya
onde baḷu ninagagiye baḷabekayya ||