anandadinda ullasadinda ಆನಂದದಿಂದ ಉಲ್ಲಾಸದಿಂದ
ಆನಂದದಿಂದ ಉಲ್ಲಾಸದಿಂದ ಯೇಸುವನ್ನು ಸ್ತುತಿಸೋಣ
ಸಂಭ್ರಮದಿಂದ ಸಡಗರದಿಂದ ಉತ್ಸವ ಮಾಡೋಣ
ಈಗಿರುವ ಸಮಯ ಅಮೂಲ್ಯವೆಂದೆಣಿಸಿ ಜಯಘೋಷ ಮಾಡೋಣ
ಜಯ ಮಂಗಳಂ ದೇವಾ ||2||
1.ದೇವರ ವಾಗ್ಧಾನಗಳು ನೆರವೇರ್ವವು
ಕಲ್ಲು ಬಂಡೆಗಳು ಕೂಗಿ ಹೇಳ್ವವು
ಕಣ್ಣೀರೆಲ್ಲ ಒರೆಸಲು ತಿರುಗಿ ಬರುವನು
ಯೇಸು ಮೇಘರೂಢನಾಗಿ ಬರುವನು
2.ಪ್ರೀತಿ ಭಕ್ತಿಗಳು ನಮ್ಮಲಿರಲಿ
ಸ್ತುತಿಸ್ತೋತ್ರ ಗೀತೆಯೋಂದು ಜೋತೆಗಿರಲಿ
ಜಯಘೋಷ ಮಾಡುತಲಿ ಸ್ತುತಿಸೋಣಾ
ನಾವು ಆತನನ್ನು ಎರ್ದುಗೊಳ್ಳೋಣ