appa ninna prithisuve ಅಪ್ಪಾ ನಿನ್ನ ಪ್ರೀತಿಸುವೆ
ಅಪ್ಪಾ ನಿನ್ನ ಪ್ರೀತಿಸುವೆ
ಆಸಕ್ತಿಯಿಂದ ಪ್ರೀತಿಸುವೆ ||
1.ಎಂದೆಂದು ಸ್ತುತಿಸುವೆ
ನಿನಗಾಗಿಯೇ ತವಕಿಸುವೆ ||
ಎಲ್ಲಾ ನೀನೆ ಅಯ್ಯಾ – ನನಗೆ ||
2.ಬಲಿಯಾಗಿ ರಕ್ಷಿಸಿದೆ
ಪಾಪವನ್ನೆಲ್ಲಾ ನೀಗಿಸಿದೆ ||
ಬೆಳಕಾಗಿ ಬಂದಿರುವೆ – ನನಗೆ ||
3.ನಿನ್ ಪ್ರೀತಿವೊಂದೆ ಸಾಕು ರಾಜಾ
ಬೇರೇನು ನನಗೆ ಬೇಡ ದೇವಾ ||
ನನ್ನಾಪ್ತ ನೀನಲ್ಲವೆ – ಇಂದು ||
4.ಅನುದಿನ ಆಹಾರ ನೀನೆ ಅಯ್ಯಾ
ಬಾಳಿಗೆ ಬೆಳಕು ನೀನೆ ಅಯ್ಯಾ ||
ಆಶ್ರಯ ನೀನೆ ಅಯ್ಯಾ – ನನ್ನ ||