mahimeya deva nine ಮಹಿಮೆಯ ದೇವ ನೀನೆ
ಮಹಿಮೆಯ ದೇವ ನೀನೆ
ಮಹಾ ಪರಿಶುದ್ಧ ರಾಜಾ ನೀನೆ ||
ಸಿಂಹಾಸನ ಆಸೀನನೆ
ಸೈನ್ಯಗಳ ಕರ್ತನೆ
ಮಹಿಮೆ ನಿಮಗೆ ಮಹತ್ವ ನಿಮಗೆ
ಸ್ತುತಿ ಆರಾಧನೆ ನಿಮಗೆ ||
1.ಅಗಮ್ಯವಾದ ಬೆಳಕಿನಲ್ಲಿ
ಎಂದಿಗು ವಾಸ ಮಾಡುವವರೆ
ಆಲ್ಫ ಒಮೇಗ ನೀನಲ್ಲವೋ
ಅಧಿ ಅಂತ್ಯವು ನೀನಲ್ಲವೋ
ಮಹಿಮೆ ನಿಮಗೆ ……
2.ಸಾವಿರ ನಾಮವುಳ್ಳವರೆ
ಹತ್ತು ಸಾವಿರರಲ್ಲಿ ಧ್ವಜ ಪ್ರೀಯನೆ
ಸುಂದರರೂಪನೆ ತಗ್ಗಿನ ತಾವರೆ ||
ಇನಿಯನೆ ನನ್ನ ಪ್ರೀಯನೆ
ಮಹಿಮೆ ನಿಮಗೆ …..
3.ತುತ್ತೂರಿ ಶಬ್ಧ ಧ್ವನಿಸುವಾಗ
ಧೂತರೊಂದಿಗೆ ಬರುವವನೆ
ನಿನ್ನೊಂದಿಗೆ ನನ್ನ ಸೇರಿಸುವವನೆ ||
ನಿತ್ಯ ಜೀವ ಕೊಡುವವನೆ ||