ninna sneha sannidhyadi ನಿನ್ನ ಸ್ನೇಹ ಸಾನ್ನಿಧ್ಯದಿ
ನಿನ್ನ ಸ್ನೇಹ ಸಾನ್ನಿಧ್ಯದಿ ಎಲ್ಲ ಮೋಹವನ್ನು ಕಳಚಿ
ನಿನ್ನ ಮುಖವನ್ನು ನಾ ಹುಡುಕುವೆ
ಯೇಸು ಸುಂದರನೆ ನಿನ್ನನ್ನು ಕೊಂಡಾಡುವೆ ||
ಯೋಗ್ಯನು ನೀನೇ ನೀ ಮಾತ್ರವೇ
ಯೋಗ್ಯನು ನೀ ಮಾತ್ರವೇ ||
ನಿನ್ನಯ ಎದೆಯಲ್ಲಿ
ನನ್ನ ತಲೆಯನ್ನು ಒರಗಿಸಿ
ನಿನ್ನ ಶಭ್ದವ ನಾ ಕೇಳುವೆ
ಯೇಸು ಪ್ರಿಯತಮನೆ ನಿನ್ನಲ್ಲಿ ಮೈ ಮರೆಯುವೆ ||
ಸ್ತುತಿಗೆ ಪಾತ್ರನು ನೀ ಮಾತ್ರವೇ
ಪಾತ್ರನು ನೀ ಮಾತ್ರವೇ || ಎಲ್ಲ
ನನ್ನ ನೋವನ್ನೆಲ್ಲ ಮರೆತು
ನನ್ನ ಚಿಂತೆಯೆಲ್ಲ ತೊರೆದು
ನಿನ್ನಲ್ಲಿ ನಲಿದಾಡುವೆ
ಯೇಸು ಸ್ನೇಹಿತನೆ ನಿನ್ನನ್ನು ಆರಾಧಿಸುವೆ ||
ಶುದ್ಧನು ನೀನೆ ನೀ ಮಾತ್ರವೇ
ಪರಿಶುದ್ಧನು ನೀ ಮಾತ್ರವೇ ||