Tandeya maneyalli ತಂದೆಯ ಮನೆಯಲ್ಲಿ
ತಂದೆಯ ಮನೆಯಲ್ಲಿ ಸುಖವಾಗಿ ಇದ್ದೇ
ಅಲ್ಲಿಂದ ಹೊರ ಬಂದು ಹಾಳಾಗಿ ಹೋದೆ ||
ತಂದೆಯ ಮಾತನ್ನು ನಾ ಮೀರಿ ಬಂದೆ
ಎಂದಿಗೂ ಮರೆಯದ ಪೆಟ್ಟನ್ನು ತಿಂದೆ ||
ನನ್ನ ತಂದೆಯೇ ನನ್ನ ದೇವರೇ ನನ್ನ ಕರುಣಿಸು
ಇದ್ದರು ಮನೆಯಲ್ಲಿ ಮನೆ ತುಂಬಾ ಅಳು
ಆಗಿತ್ತು ನಂದು ಅರಸನ ಬಾಳು ||
ಗೆಳೆಯರ ನಂಬಿ ನಾನದೆ ಹಾಳು
ಈಗಿಲ್ಲ ನನಗೆ ತಿನ್ನಲು ಕೂಳು ||
ನನ್ನ ತಂದೆಯೇ ನನ್ನ ದೇವರೇ ನನ್ನ ಕರುಣಿಸು
ಕೈ ತುಂಬ ಸಂಪತ್ತು ನಾ ಬೇಡಿ ತಂದೆ
ಗರ್ವದಿ ನನ್ನಂತೆ ಯಾರಿಲ್ಲಾ ಎಂದೆ ||
ಮೋಜಿನ ಕುಡಿತಕ್ಕೆ ನಾನೆಲ್ಲ ಸುರಿದೆ
ಕುಡಿತದ ಅಮಲಲ್ಲಿ ನಾನಾದೆ ಬರಿದು ||
ನನ್ನ ತಂದೆಯೇ ನನ್ನ ದೇವರೇ ನನ್ನ ಕರುಣಿಸು
ಇನ್ನೆಲ್ಲಿ ದಾರಿ ಉಂಟಯ್ಯಾ ಎನಗೆ
ಮರಣವೆ ಗತಿಯು ಬೇರಿಲ್ಲ ಕೊನೆಗೆ ||
ತಂದೆಯ ಬಳಿಗೆ ನಾ ಓಡಿ ಹೋಗಿ
ಕ್ಷಮೆಯನು ಕೇಳುವೆ ಚರಣಕ್ಕೆ ಬಾಗಿ ||
ನನ್ನ ತಂದೆಯೇ ನನ್ನ ದೇವರೇ ನನ್ನ ಕರುಣಿಸು
tandeya maneyalli sukhavagi idde
allinda hora bandu haḷagi hode ||
tandeya matannu na miri bande
endigu mareyada peṭṭannu tinde ||
nanna tandeye nanna devare nanna karuṇisu
iddaru maneyalli mane tumba aḷu
agittu nandu arasana baḷu ||
geḷeyara nambi nanade haḷu
igilla nanage tinnalu kuḷu ||
nanna tandeye nanna devare nanna karuṇisu
kai tumba sampattu na beḍi tande
garvadi nannante yarilla ende ||
mojina kuḍitakke nanella suride
kuḍitada amalalli nanade baridu ||
nanna tandeye nanna devare nanna karuṇisu
innelli dari uṇṭayya enage
maraṇave gatiyu berilla konege ||
tandeya baḷige na oḍi hogi
kṣameyanu keḷuve caraṇakke bagi ||
nanna tandeye nanna devare nanna karuṇisu