ujjivana maleyannu ಉಜ್ಜೀವನ ಮಳೆಯನ್ನು
ಉಜ್ಜೀವನ ಮಳೆಯನ್ನು ಸುರಿಸು
ಅಭಿಷೇಕ ದಾತ್ಮನಿಂದ ತುಂಬಿಸು
ಪರಲೋಕ ಬಲವನ್ನು ಕಳಿಸು
ಉಜ್ಜೀವನದಿ ಮುಂದೆ ನಡೆಸು
ನಡೆಸು ನಮ್ಮನ್ನು ನಡೆಸು
ಉಜ್ಜೀವನದಿ ಮುಂದೆ ನಡೆಸು –-2
1.ಪಂಚಶತಮ ದಿನದಿ ಬಂದಿಳಿದೆ ನೀ
ಉಜ್ಜೀವನ ದಿನವನ್ನು ಪ್ರಾರಂಭಿಸಿದ್ದಿ -2
ಸುರಿಸು ಅಗ್ನಿಯ ಸುರಿಸು
ಭಾರತವ / ಕರ್ನಾಟಕ ಉಜ್ಜೀವಿಸ ಪಡಿಸು –-2
2.ಸಲೋಮನ ಆಲಯದಿ ಬಂದಿಳಿದೆ ನೀ
ಶಕೀನ ಮಹಿಮೆಯಿಂದ್ ತುಂಬಿಸಿದೆ ನೀ -2
ತುಂಬಿಸು ನಮ್ಮನ್ನು ತುಂಬಿಸು ಆ
ಶಕೀನಾ ಮಹಿಮೆಯಿಂದ ತುಂಬಿಸು -2
3.ಒಣಗಿದ ಎಲುಬನ್ನು ಉಜ್ಜೀವಿಸಿದ್ದಿ ನಮ್ಮ
ಸಭೆಗಳನ್ನು ಇಂದು ಉಜ್ಜೀವಿಸು ನೀ –-2
ಚಲಿಸು ಆತ್ಮನೆ ಚಲಿಸು
ನಮ್ಮಸಭೆಗಳ ಮಧ್ಯದಲ್ಲಿ ಚಲಿಸು -2