yajamanane yajamanane ಯಜಮಾನನೆ ಯಜಮಾನನೆ
ಯಜಮಾನನೆ ಯಜಮಾನನೆ
ನಿನ್ನ ಸೇವೆಯ ಮಾಡುವೆನು ನಾ
ನಿನ್ನ ಮಗನಾಗಿ ಲೋಕಕ್ಕೆ ಬೆಳಕ್ಕಾಗಿ
ನಿನ್ನ ಮಗಳಾಗಿ ಲೋಕಕ್ಕೆ ಬೆಳಕ್ಕಾಗಿ
ನಿನ್ನ ಸುವಾರ್ತೆ ನಾ ಸಾರುವೆ
ಯೇಸುವೆ ಯೇಸುವೆ ನಾ ಬಾಳುವೆ ನಿನಗಾಗಿ
ಯೇಸುವೆ ಯೇಸುವೆ ನಾ ಇರುವುದು ನಿನಗಾಗಿ
1.ನನ್ನನು ರಕ್ಷಿಸಲು ಹುಡುಕಿ ಬಂದವನೆ
ನನಗೋಸ್ಕರ ನಿನ್ನ ಜೀವ ಕೊಟ್ಟವನೆ (2)
ನನ್ನನ್ನು ನೀನು ಕ್ರಯದಿಂದ ಪಡೆದೆ
ನಿನ್ನ ಮಗನಾಗಿ ರೂಪಿಸಿದೆ
ನಿನ್ನ ಮಗಳಾಗಿ ರೂಪಿಸಿದೆ
ಯೇಸುವೆ ಯೇಸುವೆ…..
2.ಬಾಳುವ ದಿನವೆಲ್ಲಾ ನಿನ್ನ ಸೇವೆ ಮಾಡುವೆ
ಲೋಕಕ್ಕೆ ನಿನ್ನ ಪ್ರೀತಿ ನಾ ಸಾರುವೆ
ಸಾವಿರಾರು ಆತ್ಮಗಳನ್ನು
ನಿನ್ನ ಬಳಿ ನಾ ಸೇರಿಸುವೆನು (2)
ನಿನ್ನ ಬರುವಿಕೆಗೆ ಸಿದ್ಧನಾಗುವೆ
ಯೇಸುವೆ ಯೇಸುವೆ…..