ninna sannidhiyalli ನಿನ್ನ ಸನ್ನಿಧಿಯಲ್ಲಿ
ನಿನ್ನ ಸನ್ನಿಧಿಯಲ್ಲಿ ಬೇಡುವೆನು
ನಿನ್ನ ಸಮ್ಮುಖ ಬಯಸುವೆನು
ದಾವಿದನ ಹಾಗೆ ಆರಾಧಿಸುವೆನು
ದಾನಿಯೇಲನ ಹಾಗೆ ಪ್ರಾರ್ಥಿಸುವೆನು
ಯೇಸುವೇ ಯೇಸುವೇ ಸ್ತೋತ್ರ ಸ್ತೋತ್ರ
ಪ್ರಭುವೇ ಪ್ರಭುವೇ ಮಹಿಮೆ ನಿನಗೆ || 2 ||
|| ನಿನ್ನ ಸನ್ನಿಧಿಯಲ್ಲಿ ||
ನೀನೇ ಬೆಳಕು ನನ್ನ ಬಾಳಿಗೆ
ನೀನೇ ದೀಪವು ನನ್ನ ಸೇವೆಗೆ || 2 ||
ಮಹಿಮೆಯ ರಾಜನೇ
ಪ್ರೀತಿಯ ಶಿಖರವೇ || 2 ||
|| ನಿನ್ನ ಸನ್ನಿಧಿಯಲ್ಲಿ ||
ನೀನೇ ಸತ್ಯಮಾರ್ಗವು ಲೋಕಕ್ಕೆ
ನೀನೇ ಉಸಿರು ನನ್ನ ಜೀವಕ್ಕೆ || 2 ||
ಅದ್ಭುತ ಸ್ವರೂಪನೇ
ಆತ್ಮಿಯ ನಾಯಕನೇ || 2 ||
|| ನಿನ್ನ ಸನ್ನಿಧಿಯಲ್ಲಿ ||
ನಿನ್ನ ನಂಬಿ ನಾನು ಬಾಳುವೆ
ನಿನ್ನ ಆಲಯದಲ್ಲಿ ಬದುಕುವೇ || 2 ||
ಪರಿಶುದ್ಧ ಆತ್ಮನೇ
ಪವಿತ್ರಾವಾದ ಆಗ್ನಿಯೇ || 2 ||
|| ನಿನ್ನ ಸನ್ನಿಧಿಯಲ್ಲಿ ||