yesu yesu yesu ಯೇಸು ಯೇಸು ಯೇಸು
ಯೇಸು ಯೇಸು ಯೇಸು
ನನ್ನ ಪ್ರೀಯಾ ಯೇಸು ||
ನೀನು ಇಲ್ಲದ ಈ ಜೀವಿತ ಕತ್ತಲೆಯಾಗಿತ್ತು
ರಾಜಾ ಕಹಿಯಾಗಿ ಹೋಯಿತು
ಹ…..ಲ್ಲೆಲೂಯಾ || 4 ||
1 ) ನಾನು ನಿನ್ನನ್ನು ಹುಡುಕಿ ಬರಲಿಲ್ಲ
ನೀನೇ ನನ್ನನ್ನು ಹುಡುಕಿ ಬಂದೆ ||
ಎಷ್ಟೊಂದು ಅಕ್ಕರೆ ನೀ ತೋರಿಸಿದೆ
ಓ ನನ್ನ ಪ್ರಿಯಾ ಯೇಸು ||
2 ) ನಿನ್ನ ಪುನರುತ್ಥಾನದ ಶಕ್ತಿಯಿಂದ
ಸತ್ತಂತ ನನ್ನನ್ನು ನೀನೆ ಬದುಕಿಸಿದೆ
ಧಾರೆ ಧಾರೆ ಸುರಿದ ನನ್ನ ಕಣ್ಣೀರು
ನೀ ಒರೆಸಿ ಸಂತೈಸಿದೆ
3 ) ನೀನು ನನ್ನ ಜೊತೆಯಲ್ಲಿ ಇರುವಾಗ
ಹೆದರುವ ಅವಕಾಶ ನನಗೆ ಇಲ್ಲಾ ||
ವೈರಿಗಳ ಎದುರಿನಲ್ಲಿ ತಲೆ ಎತ್ತಲ್ಪಡುವಂತೆ
ಅಭಿಷೇಕ ನೀ ಮಾಡಿದೆ ||