kayuvaru nanna kayuvaru ಕಾಯುವರು ನನ್ನ ಕಾಯುವರು
ಕಾಯುವರು ನನ್ನ ಕಾಯುವರು
ಕಾಲವೆಲ್ಲ ನನ್ನ ಕಾಯುವರು
ಕಳವಳವಿಲ್ಲ ನನಗೆ ಕಳವಳವಿಲ್ಲ
(ಭಯಪಡೆನು ನಾ ಭಯಪಡೆನು)
ಕಡೆಯವರೆಗೂ ನನ್ನ ಕಾಯುವರು
“ಹಲ್ಲೆಲೂಯ,ಹಲ್ಲೆಲೂಯ ನನ್ನ ಯೇಸುವಿಗೆ ಹಲ್ಲೆಲೂಯ”
ವಂದನೆಯು,ವಂದನೆಯು “ನನ್ನ ಯೇಸುವಿಗೆ ವಂದನೆಯು”
ಆತ್ಮವ ಕರೆಪಡದೆ ಕಾಯುವರು
ಸೈತಾನನ ಬೆಲೆಗಳ ಹರಿದಾಕುವರು
ಜಾರದಂತೆ ಕಾಯಲು ಶಕ್ತನು
ಬರೋಣದಿ ಹಷಿ೯ಸ ಮಾಡ್ವವರೇ
ಕೆಡುಕುಗಳು ನನ್ನ ಆವರಿಸಿದರು
ಹಾನಿಗಳು ಬರದಂತೆ ಕಾಯುವರು
ಕೆಡುಕನು ಬಾಣಗಳ ಎಸೆದರು ಅಗ್ನಿಸ್ತಂಭವಾಗಿ ಕಾಯುವರು
ಹೋಗುವಾಗ,ಬರುವಾಗ ಕಾಯುವರು
ನನ್ನ ಯೇಸು ಜೋತೆಯಿದ್ದು ಕಾಯುವರು
ಕಣ್ಣಿನ ಗುಡ್ಡೆಯಂತೆ ಕಾಯುವರು
ಕಣ್ಣೀರ್ ಸುರಿಸದಂತೆ ಕಾಯುವರು