mruthyunjaya ಮೃತ್ಯುಂಜಯನೇ
MruthyunJaya
ಮೃತ್ಯುಂಜಯನೇ ಮೃತ್ಯುಂಜಯನೇ; ನನ್ನೇಸು ರಾಜನೇ
ಇಗೋ ಸತ್ತವನಾಗಿ, ಮರಣವ ಗೆದ್ದು, ಎದ್ದು ಬಂದವನೇ ||2||
ನನ್ನೇಸು ರಾಜನೇ ನನ್ನೇಸು ರಾಜನೇ
ಮೃತ್ಯುಂಜಯನೇ ಮೃತ್ಯುಂಜಯನೇ ||2||
ಪರಿಶುದ್ಧನೆಂಬುದು ನಿನ್ನ ನಾಮ
ಪರಿಶುದ್ಧನೆನ್ನಲು, ನೀ ಮಾತ್ರ ಯೋಗ್ಯ
ಪರಿಶುದ್ಧ ಪರಿಶುದ್ಧ ನೀನೇ, ನನ್ನೇಸು ರಾಜನೇ ||2||
ಇಗೋ ಸತ್ತವನಾದೆ ನೀ, ಯುಗಯುಗಕ್ಕೂ ಜೀವಿಸಿ
ನನ್ನಲ್ಲಿ ನೆಲೆಸಲು, ನೀ ಮರಣವ ಗೆದ್ದು ಬಂದೆ ||2||
ನನ್ನೇಸು ರಾಜನೇ ನನ್ನೇಸು ರಾಜನೇ
ಮೃತ್ಯುಂಜಯನೇ ಮೃತ್ಯುಂಜಯನೇ ||2||
ನನ್ನ ಪಾಪವ ಅಳಿಸಲು, ನರನಾಗಿ ನೀ ಬಂದೆ
ನಾ ಅದನ್ನು, ಅರಿಯದೆ ಹೋದೆನು ||2||
ನೀನಾದರೂ ನನ್ನನ್ನು ಬಿಟ್ಟುಕೊಡದೇ
ನಿನ್ನ ರಕ್ತವ ಕೊಟ್ಟು ಬಿಡಿಸಿರುವೆ
ನನ್ನಾತ್ಮಕ್ಕೆ ನಿನ್ನ ಜೀವಕೊಟ್ಟು, ಮರುಜನ್ಮವ ನೀಡಿದೆ ||2||
ಇಗೋ ಸತ್ತವನಾದೆ ನೀ, ಯುಗಯುಗಕ್ಕೂ ಜೀವಿಸಿ
ನನ್ನಲ್ಲಿ ನೆಲೆಸಲು, ನೀ ಮರಣವ ಗೆದ್ದು ಬಂದೆ ||2||
ನನ್ನೇಸು ರಾಜನೇ ನನ್ನೇಸು ರಾಜನೇ
ಮೃತ್ಯುಂಜಯನೇ ಮೃತ್ಯುಂಜಯನೇ ||2||
ಮರಣವು ನಿನ್ನನ್ನು ಸೋಲಿಸಲು ಆಗಲಿಲ್ಲ
ಬದಲಿಗೆ ಮರಣವ ನೀನೇ ಜಯಿಸಿರುವೆ ||2||
ಆ ಜಯವನ್ನು ನನಗಾಗಿ ನೀಡಿರುವೆ
ನಿನ್ನ ಜಯದಲ್ಲೇ ಎಂದೆಂದೂ ಜೀವಿಸುವೆ
ನೀ ಕೊಟ್ಟ ಜಯವನು ಮರೆಯದೇ,
ನೆನೆದು ನೆನೆದು ಹಾಡುವೆ ||2||
ಇಗೋ ಸತ್ತವನಾದೆ ನೀ, ಯುಗಯುಗಕ್ಕೂ ಜೀವಿಸಿ
ನನ್ನಲ್ಲಿ ನೆಲೆಸಲು, ನೀ ಮರಣವ ಗೆದ್ದು ಬಂದೆ ||2||
ನನ್ನೇಸು ರಾಜನೇ ನನ್ನೇಸು ರಾಜನೇ
ಮೃತ್ಯುಂಜಯನೇ ಮೃತ್ಯುಂಜಯನೇ ||2||