ನೀನಿಲ್ಲದೆ ನಾನಿಲ್ಲ
Neenillade Naanilla
ನೀನಿಲ್ಲದೆ ನಾನಿಲ್ಲ ನಿನ್ನ ಪ್ರೀತಿ ಸಾಕಯ್ಯ
ನೀನಿಲ್ಲದೆ ನಾನಿಲ್ಲ ನಿನ್ನ ಕರುಣೆ ಸಾಕಯ್ಯ
ಯೇಸಯ್ಯ.... ನಿನ್ನ ದಯೆಸಾಕೇನಾಗೈಯ್ಯ
ಯೇಸಯ್ಯ.... ನಿನ್ನ ಕೃಪೆ ಸಾಕೇನಾಗೈಯ್ಯ
೧. ನನ್ನ ಪ್ರವಾಸದ ಮನೆಯಲ್ಲಿ ಹೃದಯ ನಿನ್ನ ಆಲಯ
ನಿನ್ನ ನಿಬಂಧನೆಗಳು ಗಾಯನವಾದವು//೨//
ನಿನ್ನ ಆಲಯ ಅಭಿಮಾನ ದಯಿಸಿದೆ ಬೆಂಕಿಯಂತೆ
ನಿನ್ನ ಅಂಗಳದಲ್ಲಿ ನಿತ್ಯವೂ ಸ್ತುತಿಸುವೆ //೨//
//ಯೇಸಯ್ಯ....//
೨. ನಿನ್ನ ಪ್ರೇಮಾನುಬಾವ ಜೀವಕ್ಕಿಂತಲೂ ಶ್ರೇಷ್ಠ
ನನ್ನ ಬಾಯಿ ನಿನ್ನ ನೀತಿ ವರ್ಣಿಸುವುದು //೨//
ನನ್ನ ಬಾಯಲ್ಲಿ ನೂತನ ಕೀರ್ತನೆ ಹುಟ್ಟಿಸಿದೆ
ಅದು ನಮ್ಮ ದೇವರ ಸ್ತೋತ್ರದ ಪರಿಮಳವೇ //೨//
//ಯೇಸಯ್ಯ....//
೩. ಪ್ರಸನ್ನತೆಯ ಕಾಲದಲ್ಲಿ ನನ್ನ ಮನವಿ ಕೇಳಿದೆ
ರಕ್ಷಣೆಯ ದಿನದಲ್ಲಿ ನನಗೆ ಸಹಾಯ ಮಾಡಿದೆ //೨//
ನಿನ್ನ ಜನನ ಮರಣ ಧ್ಯಾನಿಸುವೆನಯ್ಯ
ನಿನ್ನ ಪುನರುತ್ಥಾನ ಅದ್ಭುತವಾಗಿದೆ //೨//
//ಯೇಸಯ್ಯ....//
