ಎಂದೂ ಆನಂದ ನನ್ನೇಸು ನೀಡುವಾ
ಎಂದೂ ಆನಂದ ನನ್ನೇಸು ನೀಡುವಾ
ಸ್ತುತಿಸುವೇ ಸ್ತುತಿಸುವೇ
ಸ್ತುತಿಸುತ್ತಲೇ ಇರುವೇ
ಹಲ್ಲೆಲೂಯ ಆನಂದವೇ
ಹಲ್ಲೆಲೂಯ ಆನಂದವೇ
1. ಉನ್ನತ ಮರೆಯಲ್ಲಿ ಶಕ್ತನ ನೆರಳಲ್ಲಿ
ಎಂದೂ ಇರುವೆನೂ
ಕರ್ತನ ನೋಡಿ ಆಶ್ರಯ ಬಂಡೆ
ಎಂದೇ ಕರೆವೆನು
2. ರೆಕ್ಕೆಯಿಂದ ನನ್ನ ಹೊದಿಸಿ
ಕಾದು ನಡೆಸುವಾ
ಆತನ ವಚನ ಆತ್ಮನ ಆಯುಧ
ನನಗೇ ಖೇಢ್ಯವೂ
3. ಮಾರ್ಗದಲ್ಲೆಲ್ಲಾ ನನ್ನನ್ನು ಕಾಯಲು
ದೂತರು ನನಗುಂಟೂ
ಕಾಲು ಕಲ್ಲಿಗೆ ತಗಲದ ಹಾಗೆ
ಕರದಲ್ಲಿ ಹಿಡಿವರು
4. ಸಿಂಹದ ಮೇಲೂ ಸರ್ಪದ ಮೇಲೂ
ನಡೆದೇ ಹೋಗುವೇ
ವೈರಿಯ ಸಕಲ ಶಕ್ತಿಯ ಜಯಿಸಲು
ಅಧಿಕಾರ ನನಗುಂಟು
5. ಕಷ್ಟದ ಸಮಯದಿ ಕರೆಯುವ ನನಗೆ
ಉತ್ತರ ನೀಡುವಾ
ನನ್ನೊಡನಿದ್ದು ಬಿಡುಗಡೆ ಕೊಟ್ಟು
ನನ್ನನ್ನು ನಡೆಸುವಾ
