ನಿನ್ನನ್ನೇ ನಿರೀಕ್ಷಿಸಿ
Ninnanne Nireekshisi
ನಿನ್ನನ್ನೇ ನಿರೀಕ್ಷಿಸಿ ಹೊಸ ಬಲವ ಹೊಂದುವೆನು
ಹದ್ದಿನಂತೆ ರೆಕ್ಕೆಯನ್ನು ನಾ ಚಾಚಿ ಏರುವೆನು
|| ನಾ ಓಡಿ ದಣಿಯೇನು, ನಾ ನಡೆದು ಬಳಲೆನು
ಯೆಹೋವ ನಿನ್ನಲ್ಲಿಯೇ ನನ್ನ ಭರವಸೆಯೂ ಸದಾ ||
1 ನನ್ನ ಅಪರಾಧಗಳನ್ನು ಕ್ಷಮಿಸುವವ ನೀನಲ್ಲವೋ
ಸಮಸ್ತ ರೋಗವನ್ನು ಗುಣಪಡಿಸಲು ನೀ ಶಕ್ತನು
ನನ್ನ ಜೀವವ ನಾಶದಿಂದ ತಪ್ಪಿಸಿ ಕಾಯ್ವವನೇ
ಪ್ರೀತಿ ಕೃಪೆಯೆಂಬ ಕಿರೀಟದಿ ನನ್ನನ್ನು ಶೃಂಗರಿಸುವೆ
|| ನಾ ಓಡಿ ದಣಿಯೇನು, ನಾ ನಡೆದು ಬಳಲೆನು
ಯೇಸುವೇ ನಿನ್ನಲ್ಲಿಯೇ ನನ್ನ ನಂಬಿಕೆಯು ಸದಾ ||
2 ಶ್ರೇಷ್ಠವರಗಳಿಂದೆನ್ನಾಶೆಯ ಪೂರ್ತಿಗೊಳಿಸ್ವವ ನೀನಲ್ಲವೋ
ಹದ್ದಿನಂತೆ ಯೌವ್ವನವ ತಿರುಗಿ ಬರ ಮಾಡ್ವವನೇ
ಯೆಹೋವನೇ ನಮ್ಮಯ ನೀತಿಯನ್ನು ಸಾಧಿಸುವೆ.
ಕುಗ್ಗಿ ಹೋದವರ ನ್ಯಾಯವ ನೀ ಮಾತ್ರ ಸ್ಥಾಪಿಸುವೇ.
|| ನಾ ಓಡಿ ದಣಿಯೇನು, ನಾ ನಡೆದು ಬಳಲೆನು
ಆತ್ಮನೇ ನಿನ್ನಲ್ಲಿಯೇ ನನ್ನ ನಿರೀಕ್ಷೆಯು ಸದಾ
ಪವಿತ್ರಾತ್ಮನೇ ನಿನ್ನಲ್ಲಿಯೇ ನನ್ನ ನಿರೀಕ್ಷೆಯು ಸದಾ ||
