ತುಂಬಿದೆ ಹೃದಯ
ತುಂಬಿದೆ ಹೃದಯ | ಕ್ರಿಸ್ತನಿಂದ |
ನೂರರ್ವತ್ತೊಂದು | ವರುಷಗಳಿಂದ |
|: ನಡೆಸಿದ ಆತನ | ಕೊಂಡಾಡುವ |
ತ್ರಯೇಕ ದೇವನ | ಸ್ತುತಿ ಹಾಡುವ :|
೧.ಆತನೇ ನೀಡಿದ | ಸುಂದರ ಮಂದಿರ |
ಆತನೇ ನಡಿಸುವ | ಸಭಾ ಜೀವನ |
|: ಪೀಳಿಗೆ ಪೀಳಿಗೆ | ಸಾಕ್ಷಿಯಾಗಿ |
ಶಿರವೆತ್ತಿ ನಿಂತಿದೆ | ಈ ದೇವಾಲಯ :|
೨. ವಿದ್ಯಾದಾನದ| ಸುವಾರ್ತಾಸೇವೆಯ|
ಮಕ್ಕಳ, ಯುವಕರ ।ವೃದ್ಧರ ದೀನರ।
|:ಸೇವೆಯಲೆಮ್ಮನು| ಬಲಪಡಿಸು|
ಐಕ್ಯತೆ ಪ್ರೀತಿಯ| ನೆಲೆಗೊಳಿಸು :|
೩. ಕೃತಜ್ಞ ಹೃದಯದಿ | ಕೂಡಿ ನಾವಿಂದು |
| ಸ್ತುತಿ ಸಂಗೀತವ| ಹಾಡುವೆವು |
|: ಸಾಕ್ಷಿಯ ಜೀವಿತ ನಡೆಸಲೆಮ್ಮ|
ನಿನ್ನಯ ಆತ್ಮದಿ| ಅಣಿಗೊಳಿಸು :| – ಪ: ಲಿನೆಟ್ ನಟಾಶಾ
