ಸ್ತುತಿಯನ್ನೆ ಸಲ್ಲಿಸುವೆನು
ಸ್ತುತಿಯನ್ನೆ ಸಲ್ಲಿಸುವೆನು, ನನ್ನ ಯೇಸು ರಾಜನಿಗೆ
ಘನಮಾನ ಮಹಿಮೆಯನ್ನು ಹೊಂದ ಯೋಗ್ಯ ಕರ್ತನಿಗೆ
ಸ್ತುತಿಯನ್ನೆ ಸಲ್ಲಿಸುವೆನು
ನನ್ನ ಯೇಸು ರಾಜನಿಗೆ
ಘನಮಾನ ಮಹಿಮೆಯನ್ನು
ಹೊಂದ ಯೋಗ್ಯ ಕರ್ತನಿಗೆ (೨)
ಕರುಣಾಳು ಯೇಸು ಸ್ವಾಮಿ ಧರೆಗಿಳಿದು ಬಂದವನೆ
ಕೃಪೆಯುಳ್ಳ ಯೇಸು ಸ್ವಾಮಿ ನನ್ನ ಶ್ರೇಷ್ಠ ರಕ್ಷಕನು (೨)
ಕೃಪೆ ಸತ್ಯ ಪ್ರೀತಿ ನೀತಿ ಒಂದಾಗಿ ಮಾಡಿದನು
ಕಲ್ವಾರಿ ಕ್ರೂಜೆಯಲಿ //ಸ್ತುತಿಯನ್ನೆ//
ನನ್ನೇಸು ಸ್ವಾಮಿ ಮಾತ್ರ ಶ್ರೇಷ್ಠನಾದ ಕರ್ತನು
ಆಕಾಶ ಮಂಡಲವನ್ನು ನಿರ್ಮಿಸಿದಾತನು (೨)
ಆತನ ಸಾನಿಧ್ಯದಲ್ಲಿ ಮಾನಮಹಿಮೆ ಇರುವದು
ಸ್ತುತ್ಯನಾದ ದೇವರು //ಸ್ತುತಿಯನ್ನೆ//
