ಬುದ್ಧಿ ಕಲಿ ಮನುಷ್ಯ
Buddi Kali Manushya shalomgroupfellowship
ಮ್ಯಾಲಿಂದ ಮ್ಯಾಲೆ ಪೆಟ್ಟು ತಿಂದ ಸಾಕಾಗಿಲ್ ನಿನಗ
ಓಡಿ ಓಡಿ ದಣಿದ ಬಿದ್ದು ಹೋಗ್ತಿ ಹಿಂಗ
ಮನುಷ್ಯರ ನಂಬಿ ಮಾಡ ಬ್ಯಾಡ ನೀ ಕೆಲಸ
ದೇವರ ನಂಬಿದರ ಸಿಕ್ತೈತಿ ಸಂತೋಷ
ಮ್ಯಾಲಿಂದ ಮ್ಯಾಲೆ ಪೆಟ್ಟು ತಿಂದ ಸಾಕಾಗಿಲ್ ನಿನಗ
ಓಡಿ ಓಡಿ ದಣಿದ ಬಿದ್ದ ಹೋಗ್ತಿ ಹಿಂಗ
ಮನುಷ್ಯರ ನಂಬಿ ಮಾಡ ಬ್ಯಾಡ ನೀ ಕೆಲಸ
ದೇವರ ನಂಬಿದರ ಸಿಕ್ತೈತಿ ಸಂತೋಷ
ಸಾಲ ಮೂಲ ಮಾಡ್ತಿ ಯಾಕ ಉರ್ಲ ಹಾಕೋಕ
ಹಾಸಿಗ ಎಷ್ಟೈತಿ ಕಾಲಷ್ಟ ನೀ ಚಾಚ
ಈ ಲೋಕದ ಒಳಗ ಐತಿ ಬರೆ ಮೋಸ
ದೇವರನ್ನ ನಂಬ ಪಡ್ಕೋತಿ ಹೊಸ ಜೀವ
ಸಾಲ ಮೂಲ ಮಾಡ್ತಿ ಯಾಕ ಉರ್ಲ ಹಾಕೋಕ
ಹಾಸಿಗ ಎಷ್ಟೈತಿ ಅಷ್ಟ ಕಾಲ ನೀ ಚಾಚ
ಈ ಲೋಕದ ಒಳಗೆ ಐತಿ ಬರೆ ಮೋಸ
ದೇವರನ್ನ ನಂಬ ಪಡ್ಕೋತಿ ಹೊಸ ಜೀವ
ದೂರದ ಗುಡ್ಡ ಚಂದೈತಿ ಎಲ್ಲರ ಕಣ್ಣಿಗ
ಹತ್ತರ ಹೋದರ ನೀ ಬೀಳ್ತಿ ತೆಗ್ಗಿಗ
ದೂರದ ಗುಡ್ಡ ಚಂದೈತಿ ಎಲ್ಲರ ಕಣ್ಣಿಗ
ಹತ್ತರ ಹೋದರ ನೀ ಬೀಳ್ತಿ ತೆಗ್ಗಿಗ
ಕೆಟ್ಟದನ್ನ ಮಾಡೋದು ಬೀಡ ಹೆದರ ದೇವರಿಗ
ಸತ್ತ ಮೇಲೆ ಹೋಗ್ತಿ ಆ ಬೆಂಕಿ ನರಕಕ್ಕ
ದೂರದ ಗುಡ್ಡ ಚಂದೈತಿ ಎಲ್ಲರ ಕಣ್ಣಿಗ
ಹತ್ತರ ಹೋದರ ನೀ ಬೀಳ್ತಿ ತೆಗ್ಗಿಗ
ಕೆಟ್ಟದನ್ನ ಮಾಡೋದು ಬೀಡ ಹೆದರ ದೇವರಿಗ
ಸತ್ತ ಮೇಲೆ ಹೋಗ್ತಿ ಆ ಬೆಂಕಿ ನರಕಕ್ಕ
ಯೇಸು ಸ್ವಾಮಿಯ ನಂಬ ಈ ನಿತ್ಯ ಜೀವಕ್ಕ
ನಿನ್ನ ಕಷ್ಟ ಎಲ್ಲಾ ಆತನ ತಿರಿಸಕ್ಕ
ಇರುವಷ್ಟರ ವರೆಗ ಒಳ್ಳೇದ ನೀ ಮಾಡ
ಯೇಸು ಸ್ವಾಮಿ ಕರೆದ ವೈತಾನ ಪರಲೋಕ
ಯೇಸು ಸ್ವಾಮಿಯ ನಂಬ ನಿತ್ಯ ಜೀವಕ್ಕ
ನಿನ್ನ ಕಷ್ಟ ಎಲ್ಲಾ ಆತನ ತಿರಿಸೊಕ್ಕ
ಇರುವಷ್ಟರ ವರೆಗೆ ಒಳ್ಳೇದ ನೀ ಮಾಡ
ಯೇಸು ಸ್ವಾಮಿ ಕರೆದೊಯ್ತಾನ ಪರಲೋಕಕ್ಕ
ಮ್ಯಾಲಿಂದ ಮ್ಯಾಲೆ ಪೆಟ್ಟು ತಿಂದ ಸಾಕಾಗಿಲ್ ನಿನಗ
ಓಡಿ ಓಡಿ ದಣಿದ ಬಿದ್ದು ಹೋಗ್ತಿ ನೀ ಹಿಂಗ
ಮನುಷ್ಯರ ನಂಬಿ ಮಾಡ ಬ್ಯಾಡ ನೀನ ಈ ಕೆಲಸ
ದೇವರ ನಂಬಿದರ ಸಿಕ್ತೈತಿ ಸಂತೋಷ
