🎵 ಸ್ವೀಕರಿಸು
ಸ್ವೀಕರಿಸು – ಕರ್ತನೇ, ನನ್ನ ಮೊರೆಯನ್ನು ಕೇಳು | ಕೀರ್ತನೆ 61:1”
“ಕರ್ತನೇ, ನನ್ನ ಮೊರೆಯನ್ನು ಕೇಳು; ನನ್ನ ಪ್ರಾರ್ಥನೆಗೆ ಕಿವಿಗೊಡು.” — ಕೀರ್ತನೆ 61:1
“ಸ್ವೀಕರಿಸು” — ಹೃದಯದ ಆಳದಿಂದ ದೇವರಿಗೆ ಮೊರೆಯಿಡುವ, ಪ್ರಾರ್ಥನೆಯ ಆತ್ಮ ತುಂಬಿದ ಆರಾಧನಾ ಗೀತೆ. ಜೀವನದ ಬಿರುಗಾಳಿಗಳಲ್ಲಿ, ಪರೀಕ್ಷೆಗಳಲ್ಲಿ ಮತ್ತು ದುರ್ಬಲತೆಯಲ್ಲಿ ಕರ್ತನ ಸಾನ್ನಿಧ್ಯವನ್ನು ಹಾತೊರೆಯುವ ಮನದ ಮಾತನ್ನು ಈ ಗೀತೆಯು ವ್ಯಕ್ತಪಡಿಸುತ್ತದೆ.
ಕೀರ್ತನೆ 61:1ರಲ್ಲಿ ದಾವೀದನು ಹೇಳಿದಂತೆ:
“ಕರ್ತನೇ, ನನ್ನ ಮೊರೆಯನ್ನು ಕೇಳು; ನನ್ನ ಪ್ರಾರ್ಥನೆಗೆ ಕಿವಿಗೊಡು.”
ಈ ಹಾಡು ನಮ್ಮ ಪ್ರಾರ್ಥನೆಗಳು ದೇವರ ಹೃದಯಕ್ಕೆ ತಲುಪುತ್ತವೆ ಎಂಬ ನಂಬಿಕೆಯನ್ನು ಪುನರುಜ್ಜೀವನಗೊಳಿಸುತ್ತದೆ.
ಪ್ರತಿ ಸಾಲು ದೇವರ ದಯೆಯನ್ನು, ಸಮಾಧಾನವನ್ನು ಮತ್ತು ಸಂಕಟಗಳ ಸಮಯದಲ್ಲಿಯೂ ನಮ್ಮನ್ನು ಸ್ವೀಕರಿಸುವ ಅವನ ಪ್ರೀತಿಯನ್ನು ಸಾರುತ್ತದೆ.
ಈ ಗೀತೆಯನ್ನು ಬರೆಯಲು ಮತ್ತು ರೂಪಿಸಲು ದೇವರು ನೀಡಿದ ಜ್ಞಾನ, ಕೃಪೆ ಮತ್ತು ಮಾರ್ಗದರ್ಶನಕ್ಕೆ ಹೃತ್ಪೂರ್ವಕ ಧನ್ಯವಾದಗಳು. ಈ ಹಾಡು ಕೇಳುವ ಪ್ರತಿಯೊಬ್ಬರಿಗೂ ಶಾಂತಿ, ನೆಮ್ಮದಿ ಮತ್ತು ದೇವರ ಸಾನ್ನಿಧ್ಯವನ್ನು ಅನುಭವಿಸುವ ಅನುಗ್ರಹ ಲಭ್ಯವಾಗಲಿ. ನಿಮ್ಮ ಪ್ರಾರ್ಥನೆ, ಪ್ರೀತಿ ಮತ್ತು ವಿಶ್ವಾಸಕ್ಕೆ ಧನ್ಯವಾದಗಳು!
ಸ್ವೀಕರಿಸು ನನ್ನ ಮೊರೆಯ
ಅರ್ಪಿಸುವೆ ಹೃದಯದಿಂದ
ಗಣನಿಗೆ ಬಾರದ ನನ್ನನ್ನು ನೀ
ಸುರಿಸು ನಿನ್ನ ಆತ್ಮದಿಂದ
ಸ್ಪರ್ಶಿಸುವೆ ಕರಗಳನ್ನ
ನೀವೇ ನನ್ನ ಆಶ್ರಯವು
ಬಲವು ನೀವೇ ಯೇಸಯ್ಯ
ಸ್ವೀಕರಿಸು ನನ್ನ ಮೊರೆಯ
ಅರ್ಪಿಸುವೆ ಹೃದಯದಿಂದ
ಗಣನಿಗೆ ಬಾರದ ನನ್ನನ್ನು ನೀ
ಸುರಿಸು ನಿನ್ನ ಆತ್ಮದಿಂದ
ಸ್ಪರ್ಶಿಸುವೆ ಕರಗಳನ್ನ
ನೀವೇ ನನ್ನ ಆಶ್ರಯವು
ಬಲವು ನೀವೇ ಯೇಸಯ್ಯ
ನನ್ನನ್ನು ಮುತ್ತಲು
ಎಷ್ಟೊಂದು ಕಷ್ಟವ ಸಹಿಸಿದೆ
ನನ್ನನ್ನು ಮುತ್ತಲು
ಎಷ್ಟೊಂದು ಕಷ್ಟವ ಸಹಿಸಿದೆ
ಪಾಪದ ಜೀವದಿ ಪರದಾಡುತಿರಲು
ಎಲ್ಲವೂ ತೀರಿತು ಎಂದೆ
ನಿನ್ನ ಹಸ್ತವು ಕಾಪಾಡಿದೆ
ಸ್ವೀಕರಿಸು ನನ್ನ ಮೊರೆಯ
ಅರ್ಪಿಸುವೆ ಹೃದಯದಿಂದ
ನನ್ನನ್ನು ಸೆಳೆಯಲು
ನಾ ಹೇಗೆ ಮರುಳಾಗಿ ಹೋದೆ
ನನ್ನನ್ನು ಸೆಳೆಯಲು
ನಾ ಹೇಗೆ ಮರುಳಾಗಿ ಹೋದೆ
ಅಂಧಕಾರವು ನನ್ನ ತಾಕಲು
ಪಾಪಕ್ಕೆ ನಾ ಸೋತು ಹೋದೆ
ತಂದೆ ಕ್ಷಮಿಸು ನಾ ಬೇಡಿದೆ
ಸ್ವೀಕರಿಸು ನನ್ನ ಮೊರೆಯ
ಅರ್ಪಿಸುವೆ ಹೃದಯದಿಂದ
ಗಣನಿಗೆ ಬಾರದ ನನ್ನನ್ನು ನೀ
ಸುರಿಸು ನಿನ್ನ ಆತ್ಮದಿಂದ
ಸ್ಪರ್ಶಿಸುವೆ ಕರಗಳನ್ನ
ನೀವೇ ನನ್ನ ಆಶ್ರಯವು
ಬಲವು ನೀವೇ ಯೇಸಯ್ಯ
ಸ್ವೀಕರಿಸು ನನ್ನ ಮೊರೆಯ
ಅರ್ಪಿಸುವೆ ಹೃದಯದಿಂದ
ಸ್ವೀಕರಿಸು ನನ್ನ ಮೊರೆಯ
ಅರ್ಪಿಸುವೆ ಹೃದಯದಿಂದ
ಅರ್ಪಿಸುವೆ ಹೃದಯದಿಂದ
