ಪುನರುತ್ಥಾನ
ಮರಣವ ಮಣಿಸಿ ಮರಳಿದರು
ಹಾಡೋಣ ಅಲ್ಲೆಲೂಯ
ಪುನರುತ್ಥಾನಿಯಾಗಿಹರು
ಮಾಡೋಣ ಸ್ತುತಿ ಜಯ
ಅಲ್ಲೆಲೂಯ - 2 ನಮ್ಮೇಸು ರಾಜರು ಎದ್ಧಿಹರು
ಅಲ್ಲೆಲೂಯ - 2 ಶಾಶ್ವತ ಜೀವವ ತಂದಿಹರು
ಧರೆಯನು ದೇವರು ಅತಿಯಾಗಿ ಪ್ರೀತಿಸಿ
ಪ್ರೀತಿಯ ಪುತ್ರನ ನೀಡಿದರು
ಪ್ರೀತಿಯ ನರರಿಗೆ ತೋರಲು
ತ್ಯಾಗದ ಉಡುಪನು ಧರಿಸಿದರು
ಮುರಿದ ಸ್ನೇಹವ ಮತ್ತೆ ಬೆಸೆಯಲು
ಶಿಲುಬೆ ಮರದಲಿ ತೂಗಿಹರು 2
ಸಾವನು ಪ್ರಭು ಸೋಲಿಸಿ
ಜಯವನು ಸಂಪೂರ್ಣ ಗಳಿಸಿ
ಮೂರೆ ದಿನದಿ ಎದ್ದಿಹರು - 2
ಯೇಸು ಜೀವದಿ ಎದ್ದಿಹರು
ಹಾಡೋಣ ಅಲ್ಲೆಲೂಯ
ಮುಗಿಯದ ಜೀವವ ತಂದಿಹರು
ಮಾಡೋಣ ಸ್ತುತಿ ಜಯ
ಅಲ್ಲೆಲೂಯ - 2 ಜೀವಂತ ಯೇಸುವು ಜೊತೆಗಿಹರು
ಅಲ್ಲೆಲೂಯ - 2 ಶಾಶ್ವತ ಪ್ರೀತಿಯ ನೀಡಿಹರು
