• waytochurch.com logo
Song # 30365

ನೀನೇ ನನ್ನ ಆಶ್ರಯವೂ


ನನ್ನನ್ನು ಪ್ರೀತಿಸಿ, ಭಯ ಭಕ್ತಿಯಿಂದ ಕರ್ತನ ಮಾರ್ಗದಲ್ಲಿ ನಡೆಸಿ ದೇವರ ಸೇವೆಯಲ್ಲಿ ನನ್ನನ್ನು ಪ್ರೋತ್ಸಾಹಿಸಿ, ಈಗ ಕರ್ತನ ಸನ್ನಿಧಿಯಲ್ಲಿರುವ ನನ್ನ ಪ್ರೀತಿಯ ತಂದೆಯವರ ಸವಿನೆನಪಿನೊಂದಿಗೆ ಈ ಹಾಡನ್ನು ದೇವರ ಮಹಿಮೆಗಾಗಿ ಸಮರ್ಪಿಸುತ್ತಿದ್ದೇನೆ.




ನೀನೇ ನನ್ನ ಆಶ್ರಯವೂ ಎಂದೆಂದೂ ನಾ ಹಾಡುವೇ
ನೀನೇ ನನ್ನ ಸರ್ವಸ್ವವೂ ಎಂದೆಂದೂ ನಾ ಸ್ತುತಿಸುವೇ
ಆರಾಧಿಸುವೆ ನಿನ್ನನ್ನೇ ಯೇಸು ರಾಜನೇ
ಸ್ತುತಿಸುವೇ ನಿನ್ನನ್ನೇ ನನ್ನ ಒಡೆಯನೇ
ನನ್ ಜೀವಮಾನವೆಲ್ಲಾ ನಿನ್ನನ್ನೇ ಆರಾಧಿಸುವೇ
ಬದುಕೊ ದಿನವೆಲ್ಲಾ ನಿನ್ನನ್ನೇ ಸ್ತುತಿಮಾಡುವೇ
ಆರಾಧನೆ ಆರಾಧನೆ ಆರಾಧನೆ ಆರಾಧನೆ -2

ಸ್ತುತಿ ಮಾಡುವಾಗ ಸೆರೆಮನೆ ನಡುಗಿ ಬಿದ್ದು ಹೋಯಿತು
ಆರಾಧಿಸುವಾಗ ಬಂಧನ ಕಳಚಿ ಬೀಳುವದು
ಸ್ತುತಿ ಮಾಡುವಾಗ ಕರ್ತನು ಜಯವ ನೀಡುವನು
ಆರಾಧಿಸುವಾಗ ವೈರಿಯೂ ಹೆದರಿ ಓಡುವನು
ನಾವೀಗ ಆರಾಧಿಸುವ ಜಯವ ಹೊಂದಿಕೊಳ್ಳುವ
ನಾವೀಗ ಸ್ತುತಿ ಮಾಡುವಾ ವೈರಿಯ ನಡುಗಿಸುವ
ಆರಾಧನೆ ಆರಾಧನೆ ಆರಾಧನೆ ಆರಾಧನೆ -2

ಭಯಪಡಬೇಡ ಮನವೇ ಯೇಸು ಜೊತೆಯಿರುವ
ಯೆಹೋವ ರಾಫಾ ನಿನ್ನ ಆರೋಗ್ಯದಾಯಕನು
ಭಯಪಡಬೇಡ ಮನವೇ ಯೇಸು ನಡೆಸುವನು
ಯೆಹೋವ ರೂವಾ ನಿನ್ನ ಒಳ್ಳೆಯ ಕುರುಬನು
ಯೆಹೋವ ನಿಸ್ಸಿ ನಿನಗೆ ಜಯವ ನೀಡುವನು
ಯೆಹೋವ ಯೀರೆ ನಿನಗೆ ಎಲ್ಲವ ಒದಗಿಸುವ
ಆರಾಧನೆ ಆರಾಧನೆ ಆರಾಧನೆ ಆರಾಧನೆ -2


                                
Posted on
  • Song
  • Name :
  • E-mail :
  • Song No
  • Song youtube video link :
    Copy sharelink from youtube and paste it here

© 2025 Waytochurch.com