ಆಧಾರ ನೀ ಬೇಕಯ್ಯ
aadhara ni bekayya
ಆಧಾರ ನೀ ಬೇಕಯ್ಯ (೪)
ಏನ್ ಬಾಳ ಬೆಳಗಿ, ಬೆಳಕಾಗಿ ಇರಲು, ಆಧಾರ ನೀ ಬೇಕಯ್ಯ (೨)
1. ಮತಿ ಹೀನಳಾ(ನಾ)ಗಿ ನಿನ್ ಮರೆತು ದೇವ, ದೂರಕ್ಕೆ ಹೋಗದ ಹಾಗೆ (೨)
ನಿನ್ನಾತ್ಮ ಹೊಂದಿ ಬಾಳಲು ಎನಗೆ ಬಲವನ್ನೂ ನೀ ನೀಡಯ್ಯ (೨) ||ಆಧಾರ||
2. ಕಷ್ಟದ ಕಡಲಲ್ಲಿ ಮುಳುಗಿ ದೇವ ತೀರದ ಭಯದಲ್ಲಿ ಇರಲು (೨)
ಅಭಯವ ನೀಡಿ ದಾರಿಯ ತೋರಲು ಹತ್ತಿರಕೆ ನೀ ಬಾರಯ್ಯ (೨) ||ಆಧಾರ||
3. ಏನ್ ಪ್ರಾಣ ಪ್ರಿಯನೇ ಯೇಸು ನಿನ್ನ ರಕ್ಷಣೆ ನಿತ್ಯವೂ ಎನಗೆ (೨)
ತಪ್ಪದೆ ನೀಡಿ ಮುಪ್ಪಿನ ವರೆಗೆ ಕೈ ಹಿಡಿದು ಕಾಪಾಡಯ್ಯ (೨) ||ಆಧಾರ||