banniri namma nirmapakanige
ಬನ್ನಿರಿ ನಮ್ಮ ನಿರ್ಮಾಣಿಕನಿಗೆ ಸಾಷ್ಟಾಂಗವೆರಗೋಣ,
ನಮ್ಮ ದೇವಾದಿ ದೇವರನ್ನು ಆರಾಧಿಸೋಣ (೨)
ಆತನೇ ನಮ್ಮ ದೇವರು, ನಾವು ಆತನ ಪ್ರಜೆಗಳು (೨),
||ಬನ್ನಿರಿ||
ಕೃತಜ್ಞತಾ ಸ್ತುತಿಯೊಡನೆ ಆತನ ಸನ್ನಿಧಿ ಸೇರೋಣ
ಕೀರ್ತನೆಯು ಜಯಘೋಷವು ಆತನಿಗೆ ಮಾಡೋಣ (೨)
||ಬನ್ನಿರಿ||
ರಕ್ಷಕನೆ ಶರಣನೆ ಉತ್ಸಾಹ ಧ್ವನಿಯ ಗೈಯುವೆವು
ಯೆಹೋವನೆ ಮಹಾ ದೇವರೇ ಸ್ತೋತ್ರದ ಗೀತೆಯ ಹಾಡುವೆವು
||ಬನ್ನಿರಿ||
ಭೂಮಿಯು ಶಿಖರಗಳು ಎಲ್ಲವೂ ಆತನವೆ
ಸಮುದ್ರವು ಒಣ ನೆಲವು ಆತನ ಕೈ ಕೆಲಸವೆ (೨)
||ಬನ್ನಿರಿ||