hasiru hullu gavalalli tangisuvavaneಹಸಿರು ಹುಲ್ಲುಗಾವಲಲ್ಲಿ ತಂಗಿಸುವವನ
ಹಸಿರು ಹುಲ್ಲುಗಾವಲಲ್ಲಿ ತಂಗಿಸುವವನೆ,
ಶಾಂತವಾದ ನೀರ ಬಳಿ ಕರೆ ತರುವವನೆ (೨),
ನನ್ ಕುರುಬನೆ, ನನ್ ಯೇಸುವೆ, ನನಗೇನು ಕೊರತೆ ಇಲ್ಲಪ್ಪ (೨), ||ಹಸಿರು ಹುಲ್ಲು ||
1 ಕೈಗಳಲ್ಲಿ ಎತ್ತಿಕೊಂಡು ಹೊತ್ತು ಸಾಗುವೆ, ಮರೆತು ಬಿಡದೆ ಆಹಾರ ಫಲ ನೀಡುವೆ (೨) ||ನನ್ ಕುರುಬನೆ||
2ಹೊಸ ಜೀವ ದಿನ ದಿನ ನನಗೆ ನೀಡುವೆ, ಪರಿಶುದ್ಧ ಮಾರ್ಗದಲ್ಲಿ ನನ್ನ ನಡೆಸುವೆ (೨) ||ನನ್ ಕುರುಬನೆ||
3ಜೀವವುಳ್ಳ ದಿನವೆಲ್ಲ ಶುಭ ಕೃಪೆಯು ನನ್ನನ್ನು ಹಿಂಬಾಲಿಸಿ ಬರುತ್ತಿರುವುದು (೨) ||ನನ್ ಕುರುಬನೆ||