kaalavu saagaravaagali
ಕಾಲವು ಸಾಗರವಾಗಲಿ,
ನನ್ನಯ ನೆನಪು ಬಂದಲ್ಲಿ
ನೀ ನನ್ನ ಬಳಿಗೆ ಬರುವೆಯ? ನೀ ನನ್ನ ಮರೆತೆಯ?
||ಕಾಲವು||
ಕಷ್ಟದ ಕಡಲಲ್ಲಿ ಮುಳುಗಿ ಮಗನೆ,
ನನ್ನಿಂದ ನೀ ದೂರ ಹೋದೆಯ?(೨)
ಅಭಯವ ನೀಡಲು, ದಾರಿಯ ತೋರಲು,
ಹತ್ತಿರಕೆ ನೀ ಬಾರೆಯ? (೨)
||ನೀ ನನ್ನ ಬಳಿಗೆ||
ಲೋಕದ ಕಡಲಲ್ಲಿ ಮುಳುಗಿ ಮಗನೆ,
ಆತ್ಮದ ಜ್ಯೋತಿಯ ನೀ ನಂದಿಸಿ (೨)
ಮರೆತೆಯ ಮನುಜ ನಿನಗಾಗಿಯೆ,
ಶಿಲುಬೇಲಿ ಬಲಿಯಾದೆ ನಾ (೨)
||ನೀ ನನ್ನ ಬಳಿಗೆ||