kannetti parvatavanne noduvenuಕಣ್ಣೆತ್ತಿ ಪರ್ವತವನ್ನೇ ನೋಡುವೆನೂ
ಕಣ್ಣೆತ್ತಿ ಪರ್ವತವನ್ನೇ ನೋಡುವೆನೂ
ಭೂಮಿ ಗಗನ ಮಾಡಿದವನ ನೋಡುವೆನೂ
ಕಾಲು ಕದಲದೆ ಕಾಯುವನು ಕರ್ತನು ಎಂದೂ ನಿದ್ರಿಸನೂ
ತೂಕಡಿಸಿ ನಿದ್ರಿಸನು ನನ್ನನ್ನು ಕಾಯುವನೂ
ಕರ್ತನ ನನ್ನ ಕಾಉವನೂ ನನಗೆ ನೆರಳಾಗಿ ಬರುವನು
ಹಗಲಿನಲ್ಲೂ ಇರುಳಿನಲ್ಲೂ ನನ್ನನ್ನು ಕಾಯುವನೂ
ಎಲ್ಲಾ ಕೇಡಿಗು ನನ್ನನ್ನು ಕರ್ತನು ಬಿಡಿಸಿ ಕಾಯುವನು
ಅನುದಿನವೂ ಕಾಯುವನೂ ನನ್ನ ಆತ್ಮವನೂ
ಹೋಗುವಾಗಲೂ ಕಾಯುವನೂ ಬರುತ್ತಿರುವಾಗಲೂ ಕಾಯುವನೂ
ಈ ದಿನವೂ ಅನುದಿನವೂ ಎಂದೆಂದು ಕಾಯುವನು