ನಿನ್ನ ದರ್ಶನ
ninna dharshana nanna ujjivana
ನಿನ್ನ ದರ್ಶನ, ನನ್ನ ಉಜ್ಜೀವನ ನನ್ನ ಆತ್ಮಕ್ಕೆ ಸಂಜೀವನ (೨)
ಸ್ತೋತ್ರವು ಎನ್ ದೇವರೆ ಸ್ತೋತ್ರವು ಎನ್ ರಕ್ಷಕನೆ (೨)
ಪಾಪದಿ ನನ್ನ ಬಿಡಿಸಿದೆ ಶಾಪವ ನನ್ನಿಂದ ಹರಿಸಿದೆ (೨)
ಕಷ್ಟವ ಹರಿಸಿ, ಹಿಂಸೆಯ ಸಹಿಸಿ (೨) ನಮಗಾಗಿ ರಕ್ತವ ಸುರಿಸಿದೆ ನೀ
||ಸ್ತೋತ್ರವು ||
ಮರಣವ ನೀನು ಜಯಿಸಿದೆ ಮೃತ್ಯುಂಜಯನಾಗಿ ಎದ್ದು ಬಂದೆ (೨)
ಸಾವಿನ ಕೊಂಡಿಯ ಮುರಿದೆ ನೀ ಅಂದು (೨) ನಿತ್ಯ ಜೀವವನ್ನು ನೀ ತೋರಿದಿ
|| ಸ್ತೋತ್ರವು ||
ಪವಿತ್ರ ಆತ್ಮ ತೈಲದಿಂದ ದೇವ ನನ್ನನ್ನು ಅಭಿಷೇಕಿಸು (೨)
ನಿನ್ನಯ ಸೇವೆಯ ಮಾಡುವಂತೆ (೨) ನನ್ನನ್ನು ಕೃಪೆಯಲ್ಲಿ ನೀ ನಡಿಸು
||ಸ್ತೋತ್ರವು ||