ninna saanidyakkeನಿನ್ನ ಸಾನಿಧ್ಯಕೆ ನನ್ನನ್ನು ಸೇರಿಸ
ನಿನ್ನ ಸಾನಿಧ್ಯಕೆ ನನ್ನನ್ನು ಸೇರಿಸು,
ನನ್ನ ಬಯಕೆಯ ಯೇಸುವೆ ತೀರಿಸು
ಆ ರಮ್ಯವಾದ ಸ್ಥಳವೇ ನನ್ನ ಸುಭಾಗ್ಯವು,
ನನ್ನ ಬಯಕೆಯು, ನನ್ನ ಬಯಕೆಯು ||ನಿನ್ನ ಸಾನಿಧ್ಯಕೆ||
1. ಹಂಬಲಿಸುತ್ತ ಕುಂದಿತು ನನ್ನ ಆತ್ಮವು,
ನಿನ್ನ ಬಳಿಗೆ ಬರಲು ಕೃಪೆಯ ತೋರಿಸು,
ನಿನ್ನ ದರ್ಶನದಿಂದಲೇ ತೃಪ್ತಿ ಪಡಿಸು (೨) ||ನಿನ್ನ ಸಾನಿಧ್ಯಕೆ||
2. ನೀನು ಕಾಣದಿರಲು ಕಳೆಗುಂದುವೆನು,
ನಿನ್ನ ಬೆಳಕ ನನ್ನಲಿ ಬೆಳಗ ಮಾಡಿಸು,
ದೇವರೇ ನಿನ್ನ ಬಿಟ್ಟರೆ, ಬಾಡಿ ಹೋಗ್ವೆನು (೨) ||ಆ ರಮ್ಯವಾದ|