nive saaka yesappa ninna sanmuka nanagappaನೀವೆ ಸಾಕು ಯೇಸಪ್ಪ
ನೀವೆ ಸಾಕು ಯೇಸಪ್ಪ, ನಿಮ್ಮ ಸಮ್ಮುಖ ನನಗಪ್ಪ (೨),
ಎಷ್ಟೊಂದು ಮಧುರವು, ನಿಮ್ಮ ಸಮ್ಮುಖವು (೨),
ಪ್ರಾಣಾತ್ಮ ಶರೀರವು, ನಿಮ್ಮನ್ನೆ ಬಯಸಿದೆ (೨), ||ನೀವೆ ಸಾಕು||
ಹೊಸ ಬಲ ನೀಡುವೆ, ಅಭಿಷೇಕ ಮಾಡುವೆ (೨),
ಫಲವುಳ್ಳ ಮರವಾಗಿ, ಬಾಳಿ ಬೆಳಗುವೆ (೨), ||ನೀವೆ ಸಾಕು||
ಅಪ್ಪಾ ನಿನ್ ಸನ್ನಿಧಿಗೆ, ತವಕದಿ ಬಂದಿರುವೆ (೨),
ನಿನ್ ಮುಖ ಕಂಡು ನಾ, ತೃಪ್ತಿ ಹೊಂದುವೆ (೨), ||ನೀವೆ ಸಾಕು||