• waytochurch.com logo
Song # 9233

paavanathmane ilidhu baa swami



ಪಾವನಾತ್ಮನೇ ಇಳಿದು ಬಾ ಸ್ವಾಮಿ, ದಹಿಸುವ ಅಗ್ನಿಯೇ ಹಬ್ಬಿಸು ಜ್ವಾಲೆಯನು,
ಪವಿತ್ರ ರೂಹನೇ ತುಂಬಿಸು ಶಕ್ತಿಯನು, ಸ್ವರ್ಗೀಯ ದಾನಗಳ ಸುರಿಸು ಈ ದಾಸನಲಿ,
ಪಾವನನೇ ಪರಮಾತ್ಮನೇ, ಪಾವನಗೊಳಿಸೆನ್ನ, (೨),
ಹೂ ಮಳೆಯಾಗಿ ಕೃಪೆಗಳನ್ನು ಎನ್ನಲಿ ಸುರಿಸಿಂದು (೨),
||ಪಾವನಾತ್ಮನೆ||
ಪಂಚಾಶತ್ತಮ ದಿನ ಅನುಗ್ರಹ ಮಳೆಯ ಪ್ರೀತಿ ಪಾತ್ರರಲ್ಲಿ ತುಂಬಿದಾತ್ಮನೆ (೨),
ಆತ್ಮ ಶಕ್ತಿ ಜ್ವಲಿಸು, ಅನುಭವವಾಗಿಸು, ಪರಿಪಾಲಿಪನೆ ನೀ ಬೇಗ ಬಾ (೨),
||ಪಾವನನೇ||
ಜಗದಲ್ಲಿ ನಿಲ್ಲಲು, ಕ್ರಿಸ್ತ ಸಾಕ್ಷಿಯಾಗಲು, ಧೈರ್ಯವೆನ್ನಲಿ ನೀ ತುಂಬಿಸು (೨),
ಸತ್ಯ ಪ್ರೀತಿ ತುಂಬಿದ ವಚನವ ಸಾರಲು, ಆತ್ಮದಿ ಶುದ್ಧತೆ ನೆರವೇರಿಸು (೨),
||ಪಾವನನೇ||


                                
Posted on
  • Song
  • Name :
  • E-mail :
  • Song No

© 2023 Waytochurch.com