• waytochurch.com logo
Song # 9237

yajamanane nan yesu rajaneಯಜಮಾನನೆ


ಯಜಮಾನನೆ, ನನ್ ಯೇಸು ರಾಜನೆ (೨),
ಆಸೆಯೆಲ್ಲಾ ಆಕಾಂಕ್ಷೆಯೆಲ್ಲಾ, ನಿನ್ ಚಿತ್ತ ಮಾಡುವುದೊಂದೆ (೨) ||ಯಜಮಾನನೆ||
ನಿನಗಾಗಿಯೆ ಬಾಳುವೆ, ನಿನ್ನ್ನನ್ನೆ ಪ್ರೀತಿಸುವೆ (೨),
ಬಲಿಯಾಗಿ ರಕ್ಷಿಸಿದೆ, ನೀ ಬಲಿಯಾಗಿ ರಕ್ಷಿಸಿದೆ, ಪರಲೋಕ ತೆರೆದಿರುವೆ (೨) ||ಯಜಮಾನನೆ||
ನನ್ ಜೀವಮಾನವೆಲ್ಲಾ ದುಡಿಯುವೆ ನಿನಗಾಗಿಯೆ (೨),
ಕರೆದಿರುವೆ ನಿನ್ನ ಸೇವೆಗೆ, ನನ್ನ ಕರೆದಿರುವೆ ನಿನ್ನ ಸೇವೆಗೆ, ಅದನ್ನು ನಾ ಮರೆಯುವೆನೆ (೨) ||ಯಜಮಾನನೆ||
ಅಪ್ಪ ನಿನ್ ಸನ್ನಿಧಿಯಲ್ಲೆ, ಹರ್ಷಿಸಿ ನಲಿಯುವೆನು (೨),
ನಿನ್ನನು ಕಾಣಲೆಂದೆ, ನಾ ನಿನ್ನನು ಕಾಣಲೆಂದೆ, ಹೃದಯವು ತವಕಿಸಿದೆ (೨) ||ಯಜಮಾನನೆ||

Posted on
  • Song
  • Name :
  • E-mail :
  • Song No

© 2023 Waytochurch.com